ಚಾಮರಾಜನಗರ: ಕಂಠಪೂರ್ತಿಕುಡಿದು ಬಂದ ಗಂಡನಿಗೆ ಪತ್ನಿ ಕಪಾಳಮೋಕ್ಷ ಮಾಡಿದ ಪರಿಣಾಮವಾಗಿ ಆತ
ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಭುಸ್ವಾಮಿ ಮೃತ ಪತಿ. ಸದಾ
ಫುಲ್ ಟೈಟಾಗಿ ಮನೆಗೆ ಬಂದು ಪತ್ನಿ ಅಂಬಿಕಾ ಜೊತೆ ಜಗಳ ಮಾಡುತ್ತಿದ್ದನು. ಶನಿವಾರ ಕೂಡ ಇದೇ ವಿಚಾರವಾಗಿ ಇಬ್ಬರ ನಡುವೆ
ಗಲಾಟೆ ನಡೆಯುತ್ತಿತ್ತು. ಕೋಪಗೊಂಡ ಅಂಬಿಕಾ, ಪತಿ
ಪ್ರಭುಸ್ವಾಮಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವೇಳೆ ಪ್ರಭುಸ್ವಾಮಿ ಕುಸಿದುಬಿದ್ದು ಸ್ಥಳದಲ್ಲಿಯೇ
ಮೃತಪಟ್ಟಿದ್ದಾನೆ. ಇದರಿಂದ ಹೆದರಿದ ಅಂಬಿಕಾ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪತಿಯ ಶವವನ್ನು ನೇಣು
ಹಾಕಿದ್ದಾಳೆ. ಪ್ರಭುಸ್ವಾಮಿಯ ಸಹೋದರಿಯರಿಗೆ ಅನುಮಾನ ಬಂದು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು
ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಬಿಕಾಳನ್ನು ಬಂಧಿಸಿದ್ದಾರೆ. ಮೃತ
ಪ್ರಭುಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





