Breaking News

ಚಿಕ್ಕಬಳ್ಳಾಪುರ ಒಂಟಿ ಮಹಿಳೆ ಕೊ*ಲೆ ಕೇಸ್, ಒಂದು ವರ್ಷದ ಬಳಿಕ ರಹಸ್ಯ ಭೇದಿಸಿದ ಪೊಲೀಸರು

ಒಂಟಿ ಮಹಿಳೆಯ ಆಸ್ತಿ ಆಸೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಭೀಕರ ಹತ್ಯೆಯ ರಹಸ್ಯವನ್ನು ಒಂದು ವರ್ಷದ ಸುದೀರ್ಘ ತನಿಖೆಯ ನಂತರ ಪೊಲೀಸರು ಭೇದಿಸಿದ್ದಾರೆ. ಮೃತಳನ್ನು ಪಾವಗಡ ತಾಲ್ಲೂಕಿನ ತಿಪ್ಪರಾಯನದುರ್ಗದ ನುಣಕಮ್ಮ (52) ಎಂದು ಗುರುತಿಸಲಾಗಿದ್ದು, ಈಕೆಯನ್ನು ಹತ್ಯೆಗೈದ ಆರೋಪಿಗಳಾದ ನಾಗಲಕ್ಷ್ಮಿ ಮತ್ತು ಆಕೆಯ ಪ್ರಿಯಕರ ಅಶೋಕ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ. ಕೊಲೆಯಾದ ಮಹಿಳೆ ನುಣಕಮ್ಮಳ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚುವ ಸಲುವಾಗಿ ಈ ಜೋಡಿ ಸಂಚು ರೂಪಿಸಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಪಾರ್ಶ್ವವಾಯು ಚಿಕಿತ್ಸೆಯ ನೆಪವೊಡ್ಡಿ ನುಣಕಮ್ಮಳನ್ನು ಬೈಕ್‌ನಲ್ಲಿ ಕರೆದೊಯ್ದ ಹಂತಕರು, ಚಿಕ್ಕಬಳ್ಳಾಪುರದ ನಿರ್ಜನ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿದ್ದರು. ಸಾಕ್ಷ್ಯ ನಾಶಪಡಿಸಲು ನಾಲ್ಕು ದಿನಗಳ ನಂತರ ಮರಳಿ ಬಂದು ಶವಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಈ ತನಿಖೆಯ ಪ್ರಮುಖ ಅಂಶವೆಂದರೆ, ಸ್ಥಳದಲ್ಲಿ ದೊರೆತ ತಲೆಬುರುಡೆ ಮತ್ತು ಅರೆಬೆಂದ ಮಹಿಳಾ ವಸ್ತುಗಳ ಆಧಾರದ ಮೇಲೆ ಪೊಲೀಸರು ಜಾರಿ ಮಾಡಿದ ಲುಕ್ ಔಟ್ ನೋಟಿಸ್. ವರ್ಷದ ನಂತರ ಸಿಕ್ಕ ಸುಳಿವಿನಿಂದ ಆರೋಪಿಗಳು ಜೈಲು ಪಾಲಾಗಿದ್ದು, ದುರಾಸೆಗೆ ಬಲಿಯಾದ ಮಹಿಳೆಗೆ ನ್ಯಾಯ ಸಿಕ್ಕಂತಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *