ನಿನ್ನೆ ತಾನೆ ಯಾದಗಿರಿಯಲ್ಲಿ ಖಾಸಗಿ ಬಸ್ಗೆ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲೇ ಆರು ಜನರು ಸಜೀವ ದಹನಗೊಂಡಿದ್ದ ಘಟನೆ ನಡೆದಿತ್ತು. ಇದೀಗ ಹೈದರಾಬಾದ್ ನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ನಡುರಸ್ತೆಯಲ್ಲಿಯೇ ಖಾಸಗಿ ಬಸ್ ಒಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಹೌದು ಹೈದರಾಬಾದ್ ನಲ್ಲಿ ರಸ್ತೆ ಮಧ್ಯೆ ಖಾಸಗಿ ಬಸ್ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್ನಲ್ಲಿ ಇದ್ದ 18 ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೈದರಾಬಾದ್ ನಿಂದ ಪಲಕಲ್ಲುಗೆ ಈ ಒಂದು ಖಾಸಗಿ ಬಸ್ ತೆರಳುತ್ತಿತ್ತು. ನಿನ್ನೆ ರಾತ್ರಿ ಕುಕಟ್ ಪಲ್ಲಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಬಸ್ ನ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ತಕ್ಷಣ ಎಚ್ಚತ್ತುಕೊಂಡು ಸಮಯಪ್ರಜ್ಞೆ ಮೆರೆದಿದ್ದಾನೆ. ಹಾಗಾಗಿ ಪ್ರಯಾಣಿಕರು ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ ಆದರೆ ಬಸ್ ಮಾತ್ರ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
