Breaking News

100 ಮಹಿಳಾ ಶವಗಳ ಮೇಲೆ ಅತ್ಯಾಚಾರ- 24 ವರ್ಷಗಳ ಬಳಿಕ ಡೇವಿಡ್ ಬಂಧನ

ಲಂಡನ್ : ನೂರು ಮಹಿಳಾ ಶವಗಳ (Female Corpses) ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು 34 ವರ್ಷಗಳ ಬಳಿಕ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇಂಗ್ಲೆಂಡ್ ನ ಈಸ್ಟ್ ಸುಸೆಕ್ಸ್ ನಲ್ಲಿ ನಡೆದಿದೆ. ಇಲ್ಲಿಯ ಟೌನ್ ಹಿಥಫ್ಲೀಡ್ (Heathfield East Sussex ) ಮೂಲದ ವ್ಯಕ್ತಿಗೆ ಶಿಕ್ಷೆ ಪ್ರಕಟವಾಗುತ್ತಿದೆ.
ಸದ್ಯ ಅಪರಾಧಿಗೆ 67 ವರ್ಷ. ಅಪರಾಧಿ ಡೇವಿಡ್ ಫುಲ್ಲರ್ (David Fuller) ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ದೋಷಿ 12 ವರ್ಷಗಲ್ಲಿ ನೂರು ಮಹಿಳಾ ಶವಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. 12 ವರ್ಷಗಲ್ಲಿ ಯಾರಿಗೂ ಒಂದು ಸುಳಿವು ಸಿಗದಂತೆ ಡೇವಿಡ್ ಈ ಕೃತ್ಯ ಎಸಗುತ್ತಿದ್ದನು.

1989ರಿಂದ 12 ವರ್ಷಗಳ ಕಾಲ ಹೀತ್ ಫೀಲ್ಡ್ ಆಸ್ಪತ್ರೆಯ ಶವಾಗಾರದಲ್ಲಿ ಡೇವಿಡ್ ಎಲೆಕ್ಟ್ರಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಶವಗಾರದ ಇಬ್ಬರು ಸಿಬ್ಬಂದಿ ಮನೆಗೆ ತೆರಳುತ್ತಿದ್ದಂತೆ ಡೇವಿಡ್ ಅಲ್ಲಿ ಕೆಲಸ ಮಾಡುತ್ತಿದ್ದನು. ಈ ಪ್ರಕರಣದ ತನಿಖೆಗೆ 2.5 ಮಿಲಿಯನ್ ಯುರೋ (21.42 ಕೋಟಿ ರೂಪಾಯಿ) ಖರ್ಚು ಮಾಡಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

1987ರಲ್ಲಿ ಮಹಿಳಾ ನರ್ಸ್ ಗಳಾದ ವೆಂಡಿ ನೇಲ್ ಮತ್ತು ಕೆರೋಲಿನಾ ಎಂಬ ಇಬ್ಬರನ್ನು ಡೇವಿಡ್ ಹತ್ಯೆ ಮಾಡಿದ್ದನು. ಜೂನ್ 23, 1987ರಂದು ಗಿಲ್ಡ್ ಫೋರ್ಡ್ ರಸ್ತೆಯಲ್ಲಿರುವ ನಿವಾಸದಲ್ಲಿ ನರ್ಸ್ ನೇಲ್ ಕೊಲೆಯಾಗಿತ್ತು. ನರ್ಸ್ ಕೆಲಸಕ್ಕೆ ಬಾರದಿದ್ದಾಗ ಸಿಬ್ಬಂದಿ ಮನಗೆ ತೆರಳಿದ್ದಾಗ ನೇಲ್ ಶವ ಹಾಸಿಗೆ ಮೇಲೆ ಪತ್ತೆಯಾಗಿತ್ತು. ನೇಲ್ ಟವಲ್ ನಲ್ಲಿ ಫುಲ್ಲರ್ ಡಿಎನ್‌ಎ ಪತ್ತೆಯಾಗಿತ್ತು.

: ಸೆಕ್ಸ್ ಬಳಿಕ ಹೃದಯ ಬಡಿತ ಹೆಚ್ಚಾಯ್ತು. ಸಹಿಸಲಾರದ ತಲೆನೋವು; ಲೈಂಗಿಕ ಕ್ರಿಯೆಯ ನಂತರದ ಅನುಭವ ಬಿಚ್ಚಿಟ್ಟ ಮಹಿಳೆ

ನವೆಂಬರ್ 24, 1987ರಲ್ಲಿ ನರ್ಸ್ ಕೆರೋಲಿನಾ ಅವರನ್ನು ಮನೆ ಮುಂಭಾಗದ ಪಾರ್ಕ್ ನಿಂದ ಅಪಹರಣ ಮಾಡಲಾಗಿತ್ತು. ಮನೆಯ ಸುತ್ತಮುತ್ತಲಿನ ಜನರಿಗೆ ಕೆರೋಲಿನಾ ಸಹಾಯಕ್ಕಾಗಿ ಕೂಗಿದ್ದ ಧ್ವನಿ ಕೇಳಿಸಿತ್ತು. ಅಪಹರಣವಾದ ವಾರದ ಬಳಿಕ ಕೆರೊಲಿನಾ ಶವ ಮನೆಯ 40 ಮೀಟರ್ ದೂರದಲ್ಲಿಯೇ ಪತ್ತೆಯಾಗಿತ್ತು. ದಾರಿಹೋಕರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

24 ವರ್ಷಗಳ ಬಳಿಕ ಡೇವಿಡ್ ಬಂಧನ

ಡೇವಿಡ್ ಫುಲ್ಲರ್ ಗೆ ಕೊಲೆಯಾದ ಇಬ್ಬರು ನರ್ಸ್ ಗಳು ಮೊದಲೇ ಪರಿಚಯ ಇದ್ದರು. ನೆಲ್ ಕೆಲಸ ಮಾಡುತ್ತಿದ್ದ ಫೋಟೋ ಡೆವಲ್ಪ್ ಮೆಂಟ್ ಚೈನ್ ನ ಗ್ರಾಹಕನಾಗಿದ್ದನು. ಇನ್ನೆ ಕೆರೋಲಿಯಾ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಗೂ ಡೇವಿಡ್ ಫುಲ್ಲರ್ ಹೋಗುತ್ತಿದ್ದನು. ಈ ಎರಡು ಘಟನೆಯ ನಂತರ 2011ರ ಸೆಪ್ಟೆಂಬರ್ ನಲ್ಲಿ ಡೇವಿಡ್ ಫುಲ್ಲರ್ ನನ್ನು ಬಂಧಿಸಲಾಯ್ತು ಎಂದು ಪೊಲೀಸರು ಹೇಳುತ್ತಾರೆ.

:ಹುಡುಗರಿಗೂ ಸ್ಕರ್ಟ್ ಧರಿಸಿ ಬರಲು ಹೇಳಿದ ಶಾಲೆ; ಏನಿದು #ClothesHaveNoGender ಅಭಿಯಾನ..?

78 ಶವಗಳ ಗುರುತು ಪತ್ತೆ

ಡೇವಿಡ್ ಫುಲ್ಲರ್ ಪ್ರಕರಣದ ವಿಚಾರಣೆ ಮೈಡ್‌ಸ್ಟೋನ್ ಕ್ರೌನ್ ನ್ಯಾಯಾಲಯದಲ್ಲಿ ನಡೆದಿದೆ. 51 ಪ್ರತ್ಯೇಕ ಪ್ರಕರಣಗಳಲ್ಲಿ ಡೇವಿಡ್ ತಪ್ಪಿತಸ್ಥನೆಂದು ಸಾಬೀತಗಾಗಿದೆ. ಎರಡು ಶವಾಗರದಲ್ಲಿ ಅತ್ಯಾಚಾರ ಎಸಗಿದ್ದ 78 ಶವಗಳ ಗುರುತು ಸಹ ಪತ್ತೆ ಮಾಡಲಾಗಿದೆ. ಸದ್ಯ ಇಬ್ಬರು ನರ್ಸ್ ಗಳ ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶರಾದ ಚೀಮಾ ಗ್ರಾಬಾ (Mrs Justice Cheema Grubb) ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಆದ್ರೆ ಶಿಕ್ಷೆಯ ಪ್ರಮಾಣ ಇನ್ನೂ ಪ್ರಕಟವಾಗಿಲ್ಲ.

ಮನೆಯಲ್ಲಿ ಆಶ್ಲೀಲ ಬುಕ್, ವಿಡಿಯೋ ಲಭ್ಯ

ಡೇವಿಡ್ ಫುಲ್ಲರ್ ಮನೆ ಪರಿಶೀಲನೆ ನಡೆಸಿದ ಪೊಲೀಸರಿಗೆ, ಅಶ್ಲೀಲ ಪುಸ್ತಕಗಳು, ಮಕ್ಕಳ ಮೇಲಿನ ಹಿಂಸೆಯ ವಿಡಿಯೋಗಳು, ಹಾರ್ಡ್ ಡ್ರೈವ್, ಪ್ಲಾಪಿ ಡಿಸ್ಕ್, ಡಿವಿಡಿಗಳು ಮತ್ತು ಮೆಮೊರಿ ಕಾರ್ಡ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಲ್ಲ ಸಾಕ್ಷ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಡಸಿ ವಿವಿಧ ಪ್ರಕರಣಗಳ ಜೊತೆ ಲಗತ್ತಿಸಲಾಗಿದೆ

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *