Breaking News

ಪೋಲಿಸ್ ಆಯುಕ್ತರ ಖಡಕ್ ಸೂಚನೆಗೆ ವಿದ್ಯಾಗಿರಿ ಠಾಣೆಗೆ ರಾತ್ರೋ ರಾತ್ರಿ ಬಂತು ಟೈರ್, ಎಂಜಿನ್‌…

(ಚಿಟೀಂಗ್ ಕೇಸ್ )ಬಿಗ್ ಟಿವಿ ನ್ಯೂಸ್ ಇಂಪ್ಯಾಕ್ಟ್

ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದ್ದ ಲಾರಿಯ ಬಿಡಿ ಭಾಗಗಳನ್ನು ಸ್ಕ್ರ್ಯಾಪ್ ಮಾಡಿ ಮಾರಾಟ ಮಾಡಲಾಗಿದ್ದ ಕುರಿತು ಬಿಗ ಟಿವಿ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು.ಇದೀಗ ಆ ಪ್ರಕರಣ ದಿನಕ್ಕೊಂದು ತಿರುವು ಪಡೆದಿದ್ದು ಸ್ಕ್ರ್ಯಾಪ ಮಾಡಿ ಮಾರಾಟ ಮಾಡಲಾಗಿದ್ದ ಬಿಡಿ ಭಾಗಗಳು ರಾತ್ರೋ ರಾತ್ರಿ ಠಾಣೆಯ ಆವರಣದಲ್ಲಿ ಪ್ರತ್ಯಕ್ಷವಾಗಿದ್ದು,ಒಂದೊಂದೆ ಸಾಮಾನುಗಳನ್ನು ವಾಪಸ್ ತರಿಸಲಾಗ್ತಿದೆ.

ಹೌದು ಬಿಗ್ ಟಿವಿ ನ್ಯೂಸ್ ವರದಿಗೆ ಎಚ್ಚೆತ್ತು ಹು-ಧಾ ಪೋಲಿಸ್ ಆಯುಕ್ತರ ಖಡಕ್ ಎಚ್ಚರಿಕೆಗೆ ಬೆದರಿ ಸ್ಕ್ರ್ಯಾಪ್ ಮಾಡಲಾಗಿದ್ದ ಕೆಲವೊಂದಿಷ್ಟು ಬಿಡಿ ಭಾಗಗಳನ್ನು

ಇದ್ದಲ್ಲಿಂದ ರಾತ್ರೋ ರಾತ್ರಿ ತರಿಸಲಾಗ್ತಿದೆ. ಫ್ರಂಟ್ ಶೋ.(ಗಾಡಿಯ ಮುಂದಿನ ಭಾಗ) ,5 ಟೈರಗಳು,ಗಾಡಿಯ ಅರ್ಧ ಎಂಜೀನ್,ಮತ್ತು ಗೇರ್ ಬಾಕ್ಸ್ ಸೇರಿದಂತೆ ಅಂತೂ ಇಂತೂ ವಿದ್ಯಾಗಿರಿ ಠಾಣೆ ಬಂದಿದೆ.ಉಳಿದ ಸಾಮಾನಗಳು ಸೇರಿದಂತೆ ಉಳಿದ ಭಾಗಗಳು ಅದ್ಯವಾಗ ಬರ್ತಾವೋ ಗೊತ್ತಿಲ್ಲಾ.

ಒಟ್ಟಿನಲ್ಲಿ ಹು-ಧಾ ಪೋಲಿಸ್ ಆಯುಕ್ತರ ಸೂಕ್ತ ಕಾನೂನು ಕ್ರಮದಿಂದ ನಾಪಾತ್ತೆಯಾಗಿದ್ದ ಸ್ಕ್ರ್ಯಾಪ ಭಾಗಗಳು ವಾಪಸ್ ಬಂದಿದೆ. ಇನ್ನುಳಿದ ಗಾಡಿಯ ಬಿಡಿ ಭಾಗಗಳು ಯಾವಾದ ಎಲ್ಲಿಂದ ಪ್ರತ್ಯೆಕ್ಷವಾಗುತ್ತೇ

ಎಂಬುದನ್ನು ಕಾದು ನೋಡಬೇಕಿದೆ.ಸದ್ಯಕ್ಕೆ ಆಯುಕ್ತರು ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದು,ತಪ್ಪು ಯಾರೇ ಮಾಡಿದರೂ ತಪ್ಪು ತಪ್ಪೇ ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *