Breaking News

ಮಹಿಳೆಯರು-ಮಕ್ಕಳಿಗಾಗಿ ಮೊದಲ ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಉದ್ಘಾಟನೆ

ಸೂಪರ್ ಸ್ಪೆಷಾಲಿಟಿ ಸ್ಪರ್ಶ್ ಆಸ್ಪತ್ರೆ ಉದ್ಘಾಟನೆ

ಬೆಂಗಳೂರು : ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ (Sparsh Group of Hospitals) ಇಂದು ತನ್ನ ವಿಶೇಷ ಮಹಿಳಾ ಮತ್ತು ಮಕ್ಕಳ ಆರೈಕೆ ಕ್ಷೇತ್ರ (Women and Child Care) ಆರಂಭಿಸಿರುವುದಾಗಿ ಘೋಷಿಸಿದೆ. ಬೆಂಗಳೂರಿನ ಇನ್‍ಫೆಂಟ್ರಿ ರಸ್ತೆಯಲ್ಲಿರುವ (Infantry Road,Bangalore)ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Shri Shivaratri Desi Kendra Swamiji ) ಉದ್ಘಾಟಿಸಿದರು‌‌.

ಈ ವೇಳೆ ಸಚಿವ ಸುಧಾಕರ್(Minister Sudhakar), ಶಾಸಕ ಶಾಮನೂರು ಶಿವಶಂಕರಪ್ಪ, ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ ಪಾಟೀಲ್, ಶಾಸಕ ಎನ್ ಎ ಹ್ಯಾರಿಸ್ ಮತ್ತಿತರರು ಹಾಜರಿದ್ದರು. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ 50-ಹಾಸಿಗೆ ಸೌಲಭ್ಯವು ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ರಕ್ಷಣೆಯ ವಲಯದಾದ್ಯಂತ 360-ಡಿಗ್ರಿ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

ಈ ಸೌಲಭ್ಯವು ನವಜಾತ ಶಿಶುಗಳ ತೀವ್ರ ನಿಗಾ ಹಾಸಿಗೆಗಳು (ಎನ್‍ಐಸಿಯು), ಶಿಶುಗಳು ಮತ್ತು ಮಕ್ಕಳಿಗಾಗಿ ಪೀಡಿಯಾಟ್ರಿಕ್ ಇಂಟೆನ್ಸಿವ್ ಕೇರ್ ಬೆಡ್‍ಗಳು (Pediatric Intensive Care Bed) (ಪಿಐಸಿಯು), ಗರ್ಭಿಣಿ ಮಹಿಳೆಯರಿಗಾಗಿ ಹೆಚ್ಚಿನ ಅವಲಂಬನೆ ಘಟಕ (ಎಚ್‍ಡಿಯು) ಸೇರಿದಂತೆ ಅಲ್ಟ್ರಾ-ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

Share News

About admin

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *