Welcome to bigtvnews   Click to listen highlighted text! Welcome to bigtvnews
Breaking News

U 19 ತ್ರಿಕೋನ ಸರಣಿಯಲ್ಲಿ ಬಾಂಗ್ಲಾ ಮಡಿಸಿದ ಭಾರತ ವೀರರು

ವಾರ್ಕೆಸ್ಟರ್​: ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಕಿರಿಯರ ತ್ರಿಕೋನ ಸರಣಿಯಲ್ಲಿ ಭಾರತ 19 ತಂಡ ಬಾಂಗ್ಲಾದೇಶ 19 ತಂಡವನ್ನು 35 ರನ್​ಗಳಿಂದ ಮಣಿಸಿದೆ.ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 264 ರನ್​ಗಳಿಸಿತು. ನಾಯಕ ಪ್ರಿಯಂ ಗಾರ್ಗ್​(100) ಶತಕ ಹಾಗೂ ಯಶಸ್ವಿ ಜೈಸ್ವಾಲ್​(63) ಅರ್ಧಶತಕ ಗಳಿಸಿ ಮಿಂಚಿದರು. ಕಿಪರ್​ ಜುರೆಲ್​ 34 ರನ್​ಗಳ ಕಾಣಿಕೆ ನೀಡಿದರು.ಬಾಂಗ್ಲಾ ಕಿರಿಯ ಪರ ಮೃತ್ಯುಂಜಯ ಚೌಧರಿ 2 ವಿಕೆಟ್​, ತಂಜಿಮ್​ ಹಸನ್​ ಸಕಿಬ್​, ಶಮಿಮ್​ ಹೊಸೈನ್​,ರಕಿಬಲ್​ ಹಸನ್​ ತಲಾ ಒಂದು ವಿಕೆಟ್​ ಪಡೆದರು.265 ರನ್​ಗಳ ಗುರಿ ಪಡೆದ ಬಾಂಗ್ಲಾದೇಶ ತಂಡ 50 ಓವರ್​ಗಳಲ್ಲಿ 229 ರನ್​ಗಳಿಗೆ ಆಲೌಟ್​ ಆಗುವ ಮೂಲಕ 35 ರನ್​ಗಳ ಸೋಲೊಪ್ಪಿಕೊಂಡಿತು. ಬಾಂಗ್ಲಾ ಪರ ತಂಜಿಮ್​ ಹಸನ್ 44, ನಾಯಕ ಅಕ್ಬರ್​ ಅಲಿ 56, ಶಮಿಮ್​ ಹೊಸೈನ್​ 46 ಹಾಗೂ ಮೃತ್ಯಂಜಯ್​ ಚೌಧರಿ 33 ರನ್​ಗಳಿಸಿ ಗೆಲುವಿಗಾಗಿ ವಿಫಲ ಹೋರಾಟ ನಡೆಸಿದರು.ಅದ್ಭುತ ಬೌಲಿಂಗ್​ ನಡೆಸಿದ ಭಾರತದ U19 ತಂಡದ ಬೌಲರ್​ಗಳಾದ ಕಾರ್ತಿಕ್​ ತ್ಯಾಗಿ 4 ವಿಕೆಟ್​, ಕನ್ನಡಿಗ ಶುಬಾಂಗ್​ ಹೆಗ್ಡೆ 3 ವಿಕೆಟ್​ ಹಾಗೂ ರವಿ ಬಿಶೋನಿ 2 ವಿಕೆಟ್​, ಪಿ ತ್ಯಾಗಿ ಒಂದು ವಿಕೆಟ್​ ಪಡೆದು ಮಿಂಚಿದರು.

Spread the love

About admin

Check Also

ಅಪ್ಪು ಸ್ಮರಣಾರ್ಥ ನ.27, 28ರಂದು ಶೋಟೋಕಾನ್ ಕರಾಟೆ ಸ್ಪರ್ಧೆ

ಹುಬ್ಬಳ್ಳಿ: ಶೋಟೋಕಾನ್ ಕರಾಟೆ ಸಂಸ್ಥೆಯ ವತಿಯಿಂದ ಪವರ್ ಸ್ಟಾರ್‌ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರ ಸ್ಮರಣಾರ್ಥವಾಗಿ ಮೂರನೇ ರಾಷ್ಟ್ರೀಯ ಮಟ್ಟದ …

Leave a Reply

Your email address will not be published. Required fields are marked *

You cannot copy content of this page
Click to listen highlighted text!