Breaking News

ದಾವಣಗೆರೆಯಲ್ಲಿ ರಾತ್ರಿ ವೇಳೆ ಟ್ರ್ಯಾಕ್ಟರ್​ ಅಡ್ಡಗಟ್ಟಿದ ಚಿರತೆ

ದಾವಣಗೆರೆ: ರೈತರು ಟ್ಟ್ಯಾಕ್ಟರ್​ನಲ್ಲಿ ಜಮೀನಿಗೆ ತೆರಳುತ್ತಿರುವ ವೇಳೆ ರೈತರಿಗೆ ಚಿರತೆ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.

ಈ ಗ್ರಾಮದ ಸುತ್ತಮುತ್ತ ಚಿರತೆ ಪದೇ ಪದೆ ಕಾಣಿಸಿಕೊಳ್ಳುತ್ತಿದ್ದು, ಇಡೀ ಗ್ರಾಮಸ್ಥರು ಭಯದಲ್ಲೇ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಚಿರತೆ ಹಾವಳಿಯಿಂದ ಭಯಭೀತರಾದ ಗ್ರಾಮಸ್ಥರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ರಾತ್ರಿ ವೇಳೆ ಜಮೀನಿನ ಕೆಲಸಕ್ಕೆ ಟ್ರ್ಯಾಕ್ಟರ್​ನಲ್ಲಿ ಹೋಗುವಾಗ ಚಿರತೆ ಟ್ರ್ಯಾಕ್ಟರ್​ ಅ​​ನ್ನು ಅಡ್ಡಗಟ್ಟಿದೆ. ಹಾರ್ನ್ ಮಾಡಿದ್ರು ಕೂಡ ಹೋಗದ ಚಿರತೆಯನ್ನು ಕಂಡು ರೈತರು ಭಯಭೀತರಾಗಿ ಸ್ವಲ್ಪ ಕಾಲ ರಸ್ತೆಯಲ್ಲೇ ಟ್ರ್ಯಾಕ್ಟರ್ ನಿಲ್ಲಿಸಿದ ಘಟನೆ ನಡೆದಿದೆ.

ಚಿರತೆ ಅಡ್ಡಗಟ್ಟಿರುವ ದೃಶ್ಯಗಳನ್ನು ರೈತರೊಬ್ಬರು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಅದ್ರೇ ಅದೃಷ್ಟವಶಾತ್ ಅದು ದಾಳಿ ನಡೆಸಿಲ್ಲ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಜಿಲ್ಲೆಯ ಹೊನ್ನಾಳಿ, ನ್ಯಾಮತಿ ತಾಲೂಕಿನ ಸುತ್ತಮುತ್ತಲು ಚಿರತೆಗಳ ಹಾವಳಿ ಹೆಚ್ಚಾಗಿರುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

Share News

About admin

Check Also

ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ವಿಶ್ವಮಾನವರ ದಿನಾಚರಣೆ: ಭರದಿಂದ ಸಾಗಿದ ಸಿದ್ಧತೆ…!

ಹುಬ್ಬಳ್ಳಿ: ಜನ್ಮದಿನದ ಸಂಭ್ರಮದಲ್ಲಿಯೂ ಬುದ್ಧ, ಬಸವ, ಅಂಬೇಡ್ಕರ್ ರ ತತ್ವಾದರ್ಶವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದ ಸಚಿವ ಸಂತೋಷ ಲಾಡ್ ಈಗ …

Leave a Reply

Your email address will not be published. Required fields are marked *

You cannot copy content of this page