ಪರಿಷತ್ ಚುನಾವಣೆ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲಾಗಿದೆ: ಸಿಎಂ

ತುಮಕೂರು: ವಿಧಾನ ಪರಿಷತ್ ಚುನಾವಣೆ ಗೆಲುವಿಗಾಗಿ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದ್ದು, ಜಿಲ್ಲೆಯ ಎಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎನ್ ಲೋಕೇಶ್ ಗೆಲ್ಲಲಿದ್ದಾರೆ. ಒಟ್ಟು 20 ಸ್ಥಾನಗಳಲ್ಲಿ ಹದಿನೈದು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ನಮಗಿದೆ ಎಂದರು.

ಎಸಿಬಿ ದಾಳಿ ಬಳಿಕ ಕಾನೂನು ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಅಲ್ಪಾವಧಿಯಲ್ಲಿ ಚಾರ್ಜ್ ಶೀಟ್ ಹಾಕುವ ಹಾಗೆ ನಿಯಮ ರೂಪಿಸಲಾಗುವುದು. ಎಸಿಬಿ ಹೊರತುಪಡಿಸಿ ಲೋಕಾಯುಕ್ತ ಬಲಪಡಿಸುವ ಯೋಚನೆ ಇಲ್ಲ. ಎಸಿಬಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು

Share News

About admin

Check Also

ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ ಸುಭಾಷ್ ಚಂದ್ರ ಬೋಸ್ ಅವರ ಪುತ್ರಿ

ನವದೆಹಲಿ :   ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನ ಹಿನ್ನಲೆ ಇಂದು ದೆಹಲಿಯ …

Leave a Reply

Your email address will not be published. Required fields are marked *

You cannot copy content of this page