ಇನ್ನೆರಡು ದಿನದಲ್ಲಿ ವಿರಾಟ್‌ ಕೊಹ್ಲಿ ODI ನಾಯಕತ್ವದ ಭವಿಷ್ಯ ನಿರ್ಧಾರ- ಎಲ್ಲರ ಚಿತ್ತ ಚೇತನ ಶರ್ಮಾ ಸಮಿತಿ ಮೇಲೆ

ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯಿಂದ ವಿರಾಟ್ ಕೊಹ್ಲಿಯ ಏಕದಿನ ನಾಯಕತ್ವದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ರೂಪಾಂತರಿ ಕೋವಿಡ್​ 19 ಭಿತಿಯ ನಡುವೆಯೂ ಭಾರತ ತಂಡ ವೇಳಾಪಟ್ಟಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದ್ದು, ದಕ್ಷಿಣ ಆಫ್ರಿಕಾ ಸರ್ಕಾರ ಕೂಡ ಅತ್ಯುತ್ತಮವಾದ ಬಯೋಬಬಲ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದೆ.

2022ರಲ್ಲಿ ಸಂಪೂರ್ಣ ಟಿ20 ಕ್ರಿಕೆಟ್​ ಪಂದ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ 7 ತಿಂಗಳಲ್ಲಿ ಕೇವಲ 6 ಏಕದಿನ ಪಂದ್ಯಗಳು ಮಾತ್ರ ನಡೆಯಲಿವೆ. ಇನ್ನು ಕೋವಿಡ್ 19 ಕಾರಣದಿಂದ ಈ ಸುದೀರ್ಘ ಪ್ರವಾಸಕ್ಕೆ 20ರಿಂದ 23 ಜನರ ತಂಡವನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸುವ ಸಾಧ್ಯತೆ ಇದೆ. ಆದ್ದರಿಂದ ಟಿ-20 ಮತ್ತು ಏಕದಿನ ತಂಡಗಳಿಗೆ ವಿಭಿನ್ನ ನಾಯಕನನ್ನು ಮುಂದುವರಿಸುವುದಕ್ಕೆ ಬಿಸಿಸಿಐ ಬಯಸುತ್ತಿಲ್ಲ. ಹಾಗಾಗಿ ಟಿ-20 ತಂಡದ ನಾಯಕನಿಗೆ ಏಕದಿನ ತಂಡವನ್ನೂ ಮುನ್ನಡೆಸುವ ಹೊಣೆ ನೀಡುವ ಚಿಂತನೆ ಕೂಡ ಇದೆ ಎನ್ನಲಾಗುತ್ತಿದೆ.

ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯ ಮುಗಿಯುವ ಮುನ್ನ ಇನ್ನೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಬಿಸಿಸಿಐ ಪ್ರಕಟಿಸಲಿದೆ. ಆದರೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೆ ತಾವೂ ಮುಂದುವರೆಯುತ್ತೇವೆ ಎಂದು ಬಿಸಿಸಿಐ ಮೂಲಗಳ ಪಿಟಿಐಗೆ ತಿಳಿಸಿವೆ.

ಮುಂದಿನ ವರ್ಷ ಕೆಲವೇ ಏಕದಿನ ಪಂದ್ಯಗಳಿರುವುದರಿಂದ ಸೀಮಿತ ಓವರ್​ಗಳ ತಂಡಗಳಿಗೆ ಇಬ್ಬರು ನಾಯಕ ಬೇಡ ಎಂಬ ಚಿಂತನೆಗಳು ನಡೆಯುತ್ತಿವೆ. ಹಾಗಾಗಿ ರೋಹಿತ್ ಶರ್ಮಾಗೆ ಏಕದಿನ ತಂಡದ ನಾಯಕತ್ವವನ್ನು ನೀಡಿದರೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ತಯಾರಿ ನಡೆಸಲು ಸಾಕಷ್ಟು ಸಮಯ ಸಿಗಲಿದೆ ಎಂದು ಬಿಸಿಸಿಐ ವಯಲದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಕೊಹ್ಲಿ ನಾಯಕತ್ವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ವಿರಾಟ್​ ಕೊಹ್ಲಿ ನಾಯಕನಾಗಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಐಸಿಸಿ ಟೂರ್ನಮೆಂಟ್​ ತಂದುಕೊಡುವಲ್ಲಿ ವಿಫಲರಾಗಿರುವುದು ಅವರ ಅಸಮರ್ಥತೆಯಾಗಿ ಉಳಿದುಕೊಂಡಿದೆ. ಈ ಕಾರಣವನ್ನಿಟ್ಟುಕೊಂಡೇ ಅವರನ್ನು ನಾಯಕತ್ವದಿಂದ ಇಳಿಸಬಹುದು ಎನ್ನಲಾಗುತ್ತಿದೆ.

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page