Breaking News

ನಿರಾಶ್ರಿತರ ತಾಣವಾದ ಎಟಿಎಂ ಬೂತ್

ಹುಬ್ಬಳ್ಳಿ: ಎಟಿಎಂ ಬೂತ್ ಒಳಗೆ ಯಾರೋ ನಿರಾಶ್ರಿತರು ಆರಾಮವಾಗಿ ಕುಳಿತಿದ್ದು, ಅಷ್ಟೇ ಅಲ್ಲದೆ ಅಲ್ಲೆ ಉಗುಳಿ ಗಲೀಜು ಕೂಡ ಮಾಡುತ್ತಿರುವ ಈ ವಿಡಿಯೋ ಹುಬ್ಬಳ್ಳಿಯ ಸಿದ್ಧಾರೂಢರ ಮಠದ ಆವರಣದಲ್ಲಿರುವ ಎಟಿಎಂನಲ್ಲಿ ನಡೆದಿದೆ.

ಈ ಎಟಿಎಂ ಬೂತ್ ಹಳೇ ಹುಬ್ಬಳ್ಳಿಯ ಪೊಲೀಸ್‌ ಹೊರಠಾಣೆ ಪಕ್ಕದಲ್ಲೆ ಇದೆ. ಇಲ್ಲಿ ಸೆಕ್ಯುರಿಟಿನೇ ಇಲ್ಲ. ಜನರು ಹಣ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಸೆಕ್ಯುರಿಟಿ ಇಲ್ಲದ ಈ ಎಟಿಎಂ ಬೂತ್‌ನಲ್ಲಿ ಏನಾದ್ರು ಕಳ್ಳತನವಾದ್ರೆ ಯಾರು ಹೊಣೆ? ಹೀಗೆ ಬೇಕಾಬಿಟ್ಟಿಯಾಗಿ SBI ದವರು ಎಟಿಎಂ ಬೂತ್‌ಗೆ ಸೆಕ್ಯುರಿಟಿ ಅಳವಡಿಸದೆ ಏನು ಮಾಡುತ್ತಿದ್ದಾರೆ? ಯಾರು ಬೇಕಾದ್ರೂ ಎಟಿಎಂ ಬೂತ್‌ನಲ್ಲಿ ವಾಸ ಮಾಡಬಹುದಾ? ಹೀಗೆ ಎಟಿಎಂ ಬೂತ್ ಒಳಗೆ ಆರಾಮವಾಗಿ ಕುಳಿತು ಅಲ್ಲೆ ಚೀಲ ಎಲ್ಲವನ್ನು ಹಾಕಿ, ಒಳಗೆ ಉಗುಳುತ್ತಿರುವುದು ವಿಡಿಯೋ ವೈರಲ್ ಆಗುತ್ತಿದೆ.

Share News

About Shaikh BigTv

Check Also

ಮಸೀದಿ ಮುಂದೆ ಗಣೇಶನ ಮೂರ್ತಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ” ; ಇನ್‌ಸ್ಪೆಕ್ಟರ್ ಧಮ್ಕಿ

ಮೈಸೂರು: ಗಣೇಶೋತ್ಸವದ ವೇಳೆ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ನೀಡಿರುವ ಎಚ್ಚರಿಕೆ ಚರ್ಚೆಗೆ ಕಾರಣವಾಗಿದೆ. …

Leave a Reply

Your email address will not be published. Required fields are marked *