Breaking News

ಸ್ಮೃತಿ ಇರಾನಿ ಪುತ್ರಿ ನಿಶ್ಚಿತಾರ್ಥ: ಫೋಟೋ ಪೋಸ್ಟ್ ಮಾಡಿದ ಕೇಂದ್ರ ಸಚಿವೆ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ತಮ್ಮ ಮಗಳ ನಿಶ್ಚತಾರ್ಥದ ಫೋಟೋವನ್ನು ಡಿಸೆಂಬರ್ 25ರಂದು ಇನ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಪುತ್ರಿ ಶಾನೆಲ್ಲೆ ಇರಾನಿ ನಿಶ್ಚಿತಾರ್ಥಕ್ಕೆ ಶುಭಕೋರಿದ್ದಾರೆ. ಸ್ಮೃತಿ ಇರಾನಿ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ಶಾನೆಲ್ಲೆ​ಗೆ ಅರ್ಜುನ್ ಮೊಣ ಕಾಲಿನ ಮೇಲೆ ಕುಳಿತು ಪ್ರೀತಿಯ ನಿವೇದನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಎರಡನೇ ಚಿತ್ರದಲ್ಲಿ ಅರ್ಜುನ್ ಭಲ್ಲಾ ಮತ್ತು ಶಾನೆಲ್ಲೆ ನಿಶ್ಚಿತಾರ್ಥದ ಬಳಿಕ ತೆಗೆದುಕೊಂಡಿರುವ ಸೆಲ್ಫಿ ಫೋಟೋ ಕಾಣಬಹುದಾಗಿದೆ. ಫೋಟೋ ಶೇರ್​ ಮಾಡುವುದರೊಂದಿಗೆ ಸ್ಮೃತಿ ಇರಾನಿ ಅವರು ಭಾವಿ ಅಳಿಯನಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು, ಈಗ ನಮ್ಮ ಹೃದಯದಲ್ಲಿ ಇರುವ ವ್ಯಕ್ತಿ ಅರ್ಜುನ್ ಭಲ್ಲಾ, ನಮ್ಮ ಹುಚ್ಚು ಕುಟುಂಬಕ್ಕೆ ಸ್ವಾಗತ. ಏಕೆಂದರೆ ನೀವು ಕ್ರೇಜಿ ಮ್ಯಾನ್, ವರ್ಸ್ಟ್ ಮಾವನೊಂದಿಗೆ ವ್ಯವಹರಿಸಬೇಕು. ನಾನು ನಿಮ್ಮ ಅತ್ತೆ ಎಂದು ಅಧಿಕೃತವಾಗಿ ಎಚ್ಚರಿಸುತ್ತೇನೆ. ದೇವರು ನಿಮಗೆ ಆಶೀರ್ವದಿಸಲಿ ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಅಂದಹಾಗೇ, ಸ್ಮೃತಿ ಇರಾನಿ ಅವರು ಶಾನೆಲ್ಲೆ ಅವರಿಗೆ ಮಲತಾಯಿಯಾಗಿದ್ದಾರೆ. ಸ್ಮೃತಿ ಇರಾನಿ ಅವರು ಜುಬಿನ್​ ಇರಾನಿಯನ್ನು ಮದುವೆಯಾಗುವುದಕ್ಕೂ ಮುನ್ನ ಜುಬಿನ್​ ಮೊನಾ ಇರಾನಿ ಎಂಬಾಕೆಯನ್ನು ಮದುವೆಯಾಗಿದ್ದರು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಶಾನೆಲ್ಲೆ ಜನಿಸಿದ್ದರು. ಆ ಬಳಿಮ ಸ್ಮೃತಿ ಇರಾನಿ ಅವರನ್ನು ಜುಬಿನ್​ ಮದುವೆಯಾಗಿದ್ದರು. ಇನ್ನು ಸ್ಮೃತಿ ಇರಾನಿ ಅವರಿಗೆ ಮಗ ಝೋಹರ್ ಹಾಗೂ ಮಗಳು ಝೋಯಿಶ್ ಎಂಬ ಇಬ್ಬರು ಮಕ್ಕಳಿದ್ದಾರೆ.

Share News

About admin

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *