ಹಾವೇರಿ : ಕೋಡಿಮಠದ ಶ್ರೀಗಳು ಆಗಾಗ ಕೆಲವೊಂದಿಷ್ಟು ಬಾರಿ ಜಗತ್ತನ್ನು ಉದ್ದೇಶಿಸಿ ಹಾಗೂ ಜನರ ಒಳಿತನ್ನು ಉದ್ದೇಶಿಸಿ ಮುಂಬರುವ ರಾಜಕೀಯದ ವಿಚಾರಗಳನ್ನು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಕೆಲವೊಂದಿಷ್ಟು ಭವಿಷ್ಯ ನುಡಿದು ಜನರಿಗೆ ಮುನ್ಸೂಚನೆ ನೀಡುತ್ತಾರೆ. ಆದರೆ, ಈ ಕೋಡಿ ಮಠದ ಶ್ರೀಗಳ ಮಾತನ್ನು ಕೆಲವರು ನಂಬುವುದಿಲ್ಲ. ಇನ್ನೂ ಕೆಲವರು ಅವರ ಮಾತಿನ ಮೇಲೆ ನಿಲ್ಲುತ್ತಾರೆ. ಹೌದು ಇತ್ತೀಚಿಗಷ್ಟೇ ರಾಣೆಬೆನ್ನೂರಿನಲ್ಲಿ ಕೋಡಿಮಠದ ಶ್ರೀಗಳಾದ ಶಿವಾನಂದ ಸ್ವಾಮೀಜಿ ಅವರು ನಡೆಸಿದ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಳಿಕ ಆ ಕಾರ್ಯ ಮುಗಿದ ನಂತರ ಮಾಧ್ಯಮದ ಜೊತೆ ಶ್ರೀಗಳು ಮಾತನಾಡಿದರು.

ಹೌದು ಕೋಡಿಮಠದ ಶ್ರೀಗಳು ಹೇಳುವ ಹಾಗೆ ಹಿಂದೆಯೇ ಸಾಕಷ್ಟು ಘಟನೆಗಳು ನಡೆದಿವೆ. ಕೊರೋನಾ ವಿಚಾರವಾಗಿ ಕೂಡ ಕೆಲವೊಂದಿಷ್ಟು ಅಹಿತಕರ ಘಟನೆಗಳು ಸಂಭವಿಸಿವೆ. ಜೊತೆಗೆ ಇತ್ತೀಚೆಗಷ್ಟೇ ಭಾರತೀಯ ಸೇನೆ ಮುಖ್ಯಸ್ಥರ ಆ ಒಂದು ಅವಗಡ ಕೂಡ ನಡೆದಿತ್ತು. ಅದರ ಬಗ್ಗೆ ಮಾತನಾಡಿ ಕೋಡಿಮಠದ ಶ್ರೀಗಳು ಮೊನ್ನೆ ಹೇಳಿದ ಹಾಗೆ ಭಾರತೀಯ ಸೇನೆಯ ಮುಖ್ಯಸ್ಥರ ಆ ಕಹಿ ಘಟನೆ ನಡೆದೇ ಹೋಯಿತು.
ಜೊತೆಗೆ ಮುಂಬರುವ ಈ ಸಂಕ್ರಾಂತಿಯೊಳಗೆ ಇನ್ನೊಂದು ದೊಡ್ಡ ಅವಗಡ ನಡೆಯಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಸಂಶಯ ಹೆಚ್ಚಾಗಲಿದೆ, ಅಸಹನೆ ಹುಟ್ಟುತ್ತಿದೆ. ಮಳೆ ಹೆಚ್ಚು ಸುರಿಯಲಿದೆ, ಜೊತೆಗೆ ರಾಜಕೀಯದಲ್ಲಿ ಕೆಲ ಕಲಹಗಳು ಉಂಟಾಗಿ ಇನ್ನಷ್ಟು ತೀವ್ರತೆ ಹೆಚ್ಚಾಗಲಿದೆ ಎಂದು ಹೇಳಿ ಕೋಡಿ ಮಠದ ಶ್ರೀಗಳು ಮುಂದಿನ ಭವಿಷ್ಯ ನುಡಿದಿದ್ದಾರೆ.
ಮತ್ತೊಂದು ಅವಗಡ ಜರಗುವುದು ಎಂಬುದಾಗಿ ಕೋಡಿಮಠದ ಶ್ರೀಗಳು ಹೇಳಿದ್ದಾರೆ ಎಂದು ಇದೀಗ ಮಾಧ್ಯಮ ಮೂಲಕ ತಿಳಿದುಬಂದಿದೆ. ಜೊತೆಗೆ ಇನ್ನಷ್ಟು ಕೊರೊನ ಕೂಡ ಹೆಚ್ಚಾಗಲಿದೆ ಎಂಬುದಾಗಿಯೂ ಸಹ ಮಾತನಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

