Breaking News

ಪ್ರಧಾನಿ ರ್ಯಾಲಿ ವಿಫಲಕ್ಕೆ ಉಗ್ರ ಸಂಚು?

ನವದೆಹಲಿ: ಪಂಜಾಬ್‌ನ ಫಿರೋಜ್‌ಪುರ ರ‍್ಯಾಲಿ ವಿಫಲಗೊಳಿಸಲು ಖಲಿಸ್ತಾನಿ ಉಗ್ರರು ಸಂಚು ನಡೆಸಿದ್ದ ವಿಷಯ ಬೆಳಕಿಗೆ ಬಂದಿದೆ ಇದೀಗ ಬೆಳಕಿಗೆ ಬಂದಿದೆ.

ರ‍್ಯಾಲಿಗೂ ಎರಡು ದಿನ ಮೊದಲು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಸಿಖ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಮುಖ್ಯಸ್ಥ ಗುರುಪಾವತ್‌ಸಿಂಗ್‌ ಪನ್ನು, ಮೋದಿ ರ‍್ಯಾಲಿ ವಿಫಲಗೊಳಿಸುವಂತೆ ಕರೆ ಕೊಟ್ಟಿದಲ್ಲದೆ, ಹೀಗೆ ಮಾಡಿದವರಿಗೆ 1 ಲಕ್ಷ ಡಾಲರ್‌ (75 ಲಕ್ಷ ರು.) ಬಹುಮಾನ ಘೋಷಿಸಿದ್ದ ವಿಡಿಯೋವೊಂದು ಇದೀಗ ಬಹಿರಂಗವಾಗಿದೆ.

ಜೊತೆಗೆ ಮೋದಿ ಕಾರಿಗೆ ಪ್ರತಿಭಟನಾಕಾರರು ಅಡ್ಡಗಟ್ಟಿದ ಬಳಿಕವೂ ವಿಡಿಯೋ ಬಿಡುಗಡೆ ಮಾಡಿರುವ ಪನ್ನು, ಇದು ಖಲಿಸ್ತಾನಿ ಸ್ವಾತಂತ್ರ್ಯಕ್ಕಾಗಿ ರೈತರು ಆರಂಭಿಸಿದ ಸ್ವಾತಂತ್ರ್ಯ ಹೋರಾಟ ಎಂದು ಘೋಷಿಸಿದ್ದಾನೆ. ಅಲ್ಲದೆ ಈ ಹಿಂದೆ ಶಸಾಸ್ತ್ರ ಹಿಡಿದು ಬಂದ ಪ್ರಧಾನಿ ಇಂದಿರಾಗಾಂಧಿಗೆ ಶಸ್ತ್ರಾಸ್ತ್ರದ ಮೂಲಕವೇ ಉತ್ತರ ನೀಡಿದ್ದೆವು. ಈಗ ನೀವು ಪಂಜಾಬ್‌ ಜನರಲ್ಲಿ ಭೀತಿ ಹುಟ್ಟುಹಾಕುತ್ತಿದ್ದೀರಿ. ನಿಮಗೆ ನಾವು ಶಾಂತಿಯುತವಾಗಿ ಮತಗಳ ಮೂಲಕವೇ ಉತ್ತರ ನೀಡಲಿದ್ದೇವೆ ಎಂದು ಪ್ರಧಾನಿ ಮೋದಿಗೆ ಎಚ್ಚರಿಸಿದ್ದಾನೆ.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *