ಅರ್ಜೆಂಟೀನಾ: ಪೊಲೀಸರು ಕೊಲೆ ಮಾಡಿರುವ ಅಪರಾಧಿ ಕ್ರಿಶ್ಚಿಯನ್ ಬೂಸ್ಟೋಸ್ ಎಂಬುವವನ್ನು ಜೈಲಿನಲ್ಲಿ ಸಿಗಲು ಹೋಗಿದ್ದ ನ್ಯಾಯಾಧೀಶೆ ಮಾರೀಲ್ ಸೌರೇಜ್ ಎಂಬುವವರು ಕಿಸ್ ಮಾಡಿದ್ದಾರೆ. ಈ ಘಟನೆ ಅರ್ಜೆಂಟೀನಾದಲ್ಲಿ ನಡೆದಿದ್ದು, ವೈರಲ್ ವಿಡಿಯೋದಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಯನ್ನು ಜೈಲಿನಲ್ಲಿ ಖಾಸಗಿಯಾಗಿ ಸಿಕ್ಕು ನ್ಯಾಯಾಧೀಶೆಯೊಬ್ಬರು ಕಿಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ವೈರಲ್ ಆಗಿಬಿಟ್ಟಿದೆ. ಇದೀಗ ಕಾನೂನು ಉಲ್ಲಂಘಿಸಿ ಜೈಲಿನಲ್ಲಿಯೇ ಅಪರಾಧಿಗೆ ಮುತ್ತಿಕ್ಕಿರುವುದಕ್ಕೆ ನ್ಯಾಯಾಧೀಶೆ ವಿರುದ್ಧ ತನಿಖೆ ನಡೆಸಲು ಆದೇಶಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

