Breaking News

SPECIAL NEWS

RCB’ಯ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ತಪಸ್ಸು ಇಡೇರಿತು…

“ಜೈ RCB” ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್​​ಗಳಿಂದ ಮಣಿಸಿದ ಆರ್​ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ’ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ …

Read More »

ಕನ್ನಡತಿ & ಸಾಹಿತಿ ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ, ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ!

ಕನ್ನಡದ ಪ್ರಮುಖ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಗರಿಮೆ ಸಂದಿದೆ. ಸಣ್ಣ ಕತೆಗಳ ಅನುವಾದಿತ ಸಂಕಲನವಾಗಿರುವ “ಹಾರ್ಟ್‌ ಲ್ಯಾಂಪ್”ಗೆ ಈ ಪ್ರಶಸ್ತಿ ಸಂದಿದೆ. ಕನ್ನಡದ ಕೃತಿಯೊಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ಹೀಗಾಗಿ, ಈ ಪ್ರಶಸ್ತಿ ಕನ್ನಡಿಗರಲ್ಲಿ ಪುಳಕವನ್ನುಂಟು ಮಾಡಿದೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾರೀ ಪೈಪೋಟಿ ಹಾಗೂ ಸ್ಪರ್ಧೆ ಇರುತ್ತದೆ. ಇಷ್ಟೊಂದು ಸ್ಪರ್ಧೆಗಳ ನಡುವೆ ಪ್ರಶಸ್ತಿ ಕನ್ನಡತಿಗೆ ಸಂದಿದೆ.ಕೆಲವೇ ದಿನಗಳ ಹಿಂದೆ …

Read More »

ಜಿಲ್ಲಾ ಉಸ್ತವಾರಿ ಸಚಿವ ಸಂತೋಷ್‌ ಲಾಡ್‌ರಿಂದ ಬೃಹತ್ ಲೋಹದ ಪ್ರತಿ ಲೋಕಾರ್ಪಣೆ.

ಡಾ.ಬಿ.ಆರ್.ಅಂಬೇಡ್ಕರ ಅವರ 134 ನೇ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ ಸಂವಿಧಾನದ ಪೀಠಿಕೆಯ ಬೃಹತ್ ಲೋಹದ ಪ್ರತಿಯನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಲೋಕಾರ್ಪಣೆ ಮಾಡಿದರು. ನಗರದ ರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಸಂವಿಧಾನ ಪುಸ್ತಕ ರೀತಿಯಲ್ಲಿ ಇದನ್ನು ಸಿದ್ಧಗೊಳಿಸಲಾಗಿದೆ. ಸಚಿವ ಲಾಡ್ ಅವರು ಲೋಕಾರ್ಪಣೆ ಮಾಡಿ, ಗೌರವ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ದಿವ್ಯ …

Read More »

ಹಾವೇರಿ ನಗರದಲ್ಲಿ 11ರಿಂದ ಒಂದೇ ಭಾರತ್ ನಿಲುಗಡೆ.

ಹಾವೇರಿ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಒಂದೇ ಭಾರತ ರೈಲು ನಿಲುವಡೆ ದಿನಾಂಕ ನಿಗದಿಯಾಗಿದೆ. ಕೇಂದ್ರ ರೈಲ್ವೆ ಕಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಏಪ್ರಿಲ್ ೧೧ ರಂದು ಮಧ್ಯಾಹ್ನ 2ಕ್ಕೆ ಹಾವೇರಿ ನಿಲ್ದಾಣದಲ್ಲಿ ಒಂದೇ ಭಾರತ ರೈಲು ನಿಲುಗಡೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ಕಳೆದ ಎರಡು ವರ್ಷಗಳಿಂದ ಸಂಚರಿಸುತ್ತಿರುವ ಒಂದೇ ಭಾರತದ ನೀಡಬೇಕು ಎಂಬ ಬೇಡಿಕೆ ಜಿಲ್ಲೆಯ ಜನರದ್ದಾಗಿತ್ತು. ಇದಕ್ಕೆ ಪೂರಕವಾಗಿ ಸಂಸದ ಬಸವರಾಜ್ …

Read More »

ಯತ್ನಾಳ್​ಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ.

ಉಚ್ಛಾಟನೆ ಬೆನ್ನಲ್ಲೇ ಮತ್ತಷ್ಟು ಆ್ಯಕ್ಟೀವ್ ಆಗಿರುವ ಯತ್ನಾಳ್​ ಎಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ ಇಂದು ಉತ್ತರ ಕರ್ನಾಟಕದ ಶಕ್ತಿದೇವಿ ಬೆಳಗಾವಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಯತ್ನಾಳ್ ಗೆ ಯಡಿಯೂರಪ್ಪ ಅವರು ಯಲ್ಲಮ್ಮನ ದರ್ಶನ ಮಾಡಿಸಿದರು. ಯಡಿಯೂರಪ್ಪ ಅಂದ್ರೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅಲ್ಲ. ದೇವಸ್ಥಾನದ ಅರ್ಚಕ ಯಡಿಯೂರಪ್ಪ ಅವರು ವಿಶೇಷ ಪೂಜೆ ಮಾಡಿ ಯತ್ನಾಳ್​​ಗೆ ಆಶೀರ್ವಾದ ಮಾಡಿದರು.

Read More »

ಬೆಳಗಾವಿ : ಬೇಸಿಗೆಯಲ್ಲಿ ಸಹಾಯ ಮಾಡಿದ ಮಳೆ ನೀರು ಸಂಗ್ರಹ.

ರಾಜ್ಯದಲ್ಲಿ ಬೇಸಿಗೆ ಬಂದರೆ ಸಾಕು ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಖಾಸಗಿ ಮ್ಯುಚುವಲ್ ಫಂಡ್ ಸಹಾಯಕ ಉಪಾಧ್ಯಕ್ಷ ಹರೀಶ್ ಸದಾನಂದ ತೇರಗಾಂವಕರ್ ಅವರು ಮುಂದಾಗಿ ಯಶಸ್ವಿಯಾಗಿದ್ದಾರೆ. ತಾವು ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ವರ್ಷ ಮಳೆ ನೀರು ಸಂಗ್ರಹ ಘಟಕ ಅಳವಡಿಸಿ ನೀರಿನ ಸಮಸ್ಯೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.ಜೊತೆಗೆ ಹರೀಶ್ ಅವರು ತಮ್ಮ ಬಡಾವಣೆಯ ಜನರಿಗೆ ಮಳೆ ನೀರು ಸಂಗ್ರಹದ ಬಗ್ಗೆ ಅರಿವು ಮೂಡಿಸಿದ್ದಾರೆ. ಅಲ್ಲದೆ …

Read More »

ಆಶ್ರಮದ ಪಾಲಾದ ಹಿರಿಯ ನಟ ಸುದರ್ಶನ್ ಪತ್ನಿಯ ನೆರವಿಗೆ ನಿಂತ ದರ್ಶನ್‌.

ತಾವೇ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ ಕೂಡ ದರ್ಶನ್‌ ಇತರರಿಗೆ ಸಹಾಯ ಮಾಡುವುದನ್ನು ತಪ್ಪಿಸಿಲ್ಲ.ಕೊಲೆ ಪ್ರಕರಣ, ಜೈಲು, ಜಾಮೀನು ಈ ರೀತಿ ತಾವೇ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ನಟ ದರ್ಶನ್‌, ಆಶ್ರಮದ ಪಾಲಾಗಿದ್ದ ಹಿರಿಯ ನಟ ಸುದರ್ಶನ್‌ ಪತ್ನಿ ಶೈಲಶ್ರೀ ಅವರ ನೆರವಿಗೆ ನಿಂತಿದ್ದು, ಯಾರೂ ಇಲ್ಲದೇ ಆಶ್ರಮ ಪಾಲಾಗಿದ್ದ ಅವರ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಗಣೇಶ್‌ ಕಾಸರಗೋಡು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ …

Read More »

ಹಬ್ಬ : ವಿಶ್ವವಸು ನಾಮ ಸಂವತ್ಸರದಲ್ಲಿ ಯುಗಾದಿ ಹಬ್ಬ.ಆಚರಣೆ ಹಿಂದಿರುವ ಹಿನ್ನೆಲೆ…

ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಆ ದಿನದಿಂದ ‘ವಿಶ್ವವಸು ನಾಮ ಸಂವತ್ಸರ’ ಪ್ರಾರಂಭವಾಗುತ್ತದೆ. ಯುಗಾದಿಯು ಹಿಂದೂ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಯುಗಾದಿ ಎನ್ನುವ ಪದವು ‘ಯುಗ’ ಮತ್ತು ‘ಆದಿ’ ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿವೆ, ಇದು ‘ಹೊಸ ಯುಗದ ಆರಂಭ’ವನ್ನು ಸೂಚಿಸುತ್ತದೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಮತ್ತು ಕರ್ನಾಟಕದಲ್ಲಿ ಯುಗಾದಿ ಎಂದು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದು ಅನಾದಿ ಕಾಲದ …

Read More »

ಎಪ್ರಿ 30ರಂದು ಅಯೋಧ್ಯೆ ರಾಮ ಮಂದಿರಕ್ಕೆ ರಾಮ ದರ್ಬಾರ್ ವಿಗ್ರಹಗಳ ಪ್ರತಿಷ್ಠಾಪನೆ

ಅಯೋಧ್ಯೆಯ ರಾಮಮಂದಿರದ ಮೊದಲನೇ ಮಹಡಿ ಹಂತದ ನಿರ್ಮಾಣ ಅಂತಿಮ ಹಂತದಲ್ಲಿದ್ದು ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವ ರಾಮ ದರ್ಬಾರ್ ವಿಗ್ರಹಗಳು ಏಪ್ರಿಲ್ 30 ರಂದು ಅಯೋಧ್ಯೆಗೆ ಪ್ರವೇಶಿಸಲಿವೆ ಎಂದು ರಾಮ ಮಂದಿರದ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮಮಂದಿರದಲ್ಲಿ ಆಕರ್ಷಿಕ ಸ್ಥಳವಾಗಿ ರಾಮ್ ದರ್ಬಾರ್ ವಿಗ್ರಹಗಳನ್ನು ಇರಿಸಲಾಗುತ್ತಿದೆ, ಸೀತಾದೇವಿ, ರಾಮ,ಹನುಮಂತ,ಸಹೋದರ ಲಕ್ಷ್ಮಣ,ಭರತ ಮತ್ತು ಶತ್ರುಘ್ನರ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ರಾಜಸ್ತಾನಿನ ಮಕ್ರಾನ ಮಾರ್ಬಲ್ ನಿಂದ ವಿಗ್ರಹಗಳನ್ನು ಕೆತ್ತಿಸಲಾಗಿದೆ. …

Read More »

ಧಾರವಾಡ ಜಿಲ್ಲೆಯ ಸೂಪರ್ ಸ್ಟಾರ್ ರೈತರು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರಾದ ನವಲಗುಂದ ತಾಲೂಕಿನ ನಾಗನೂರು ಡಾ. ಶೌಕತ್ತಲಿ ಹಜಾರೆ ಸಾಬ್ ಲಂಬನೂರ್ರವರ ಹುಬ್ಬಳ್ಳಿ ತಾಲೂಕದ ಕುಸುಗಲ್, ಪ್ರಶಾಂತ್ ಬಸವಂತಪ್ಪ ಬಿಜಾಪುರ್, ನವಲಗುಂದ ತಾಲೂಕು ನೂರು ನಂದೀಶ್ ಕುಲಕರ್ಣಿ, ಧಾರವಾಡ ಡಾ.ದ್ರಾಕ್ಷಾಯಿಣಿ ಚಿದಾನಂದ ರಾಮನಗೌಡರ್, ಕಲಘಟ್ಟಿ ತಾಲೂಕಿನ ಜಮ್ಮಿನ್ ಹಾಳಾದ ನಾಗಪ್ಪ ಉದ್ಧಣ್ಣನವರ್ಡಾ, ಅಣ್ಣಾವರ ಡಾ.ಜ್ಯೋತಿ ಚಂದ್ರಗಿರಿ ಮಠ, ಅವರಿಗೆಲ್ಲ ಜಿಲ್ಲಾಮಟ್ಟದ ವಿಕ ಸೂಪರ್ ಸ್ಟಾರ್ ಜಿಲ್ಲಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. …

Read More »