ವಿಜಯಪುರ: ಜಿಲ್ಲೆಯವಲ್ಲಿ ಜನವರಿ 1ರಿಂದ ಇಲ್ಲಿಯವರೆಗೆ 18ವರ್ಷದ ಒಳಗಿನ 50 ಮಕ್ಕಳಿಗೆ ಕೋವಿಡ್ ಸೋಂಕು ಹರಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಕೋವಿಡ್ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಅವರು, ಒಂದು ವರ್ಷದಿಂದ 18 ವರ್ಷದ ಒಳಗಿನ 50 ಮಕ್ಕಳಲ್ಲಿ ಕೊವಿಡ್ ಸೋಂಕು ಧೃಡಪಟ್ಟಿದೆ. ಇವರು ಸದ್ಯ ಹೋಂ ಐಸೋಲೇಷನ್ನಲ್ಲಿ ಆರೈಕೆ ಮಾಡಲಾಗುತ್ತಿದ್ದು, ಅವರಲ್ಲಿ ಯಾರಿಗೂ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಇಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

