Breaking News

ಕಲಘಟಗಿ ಜಾತ್ರಾ ಮಹೋತ್ಸವದ ಅದ್ದೂರಿ ಆರಂಭ

ಹುಬ್ಬಳ್ಳಿ-ಧಾರವಾಡ: ಧಾರವಾಡದ ಕಲಘಟಗಿ ತಾಲೂಕಿನಲ್ಲಿ ಪ್ರತಿ ಮೂರು ವರ್ಷಕೊಮ್ಮೆ ಜಾತ್ರಾ ಮಹೋತ್ಸವ ನೆರೆವೆರುತ್ತದೆ. ಈ ಬಾರಿಯು ಅದ್ದೂರಿಂದ ಜಾತ್ರಾ ಮಹೋತ್ಸವ ನಡೆಯಲ್ಲಿದ್ದು, ನಿನ್ನೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಗ್ರಾಮ-ದೇವಿ ಜಾತ್ರಾಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಸಂತೋಷ‌ ಲಾಡ್ ಭಾಗವಹಿಸಿದ್ದರು. ಈ ಸಮಯದಲ್ಲಿ ಕ್ಷೇತ್ರದ ಶಾಸಕರಾದ ಸಿಎಮ್‌ ನಿಂಬಣ್ಣನವರ್, ಹನ್ನೆರಡ ಸಾವಿರ ಮಠದ ಶ್ರೀಗಳಾದ ರೇವಣ್ಣಸಿದ್ದ ಸ್ವಾಮೀಜಿಗಳು, ಊರಿನ ಮುಖಂಡರು, ಗಣ್ಯರು ಹಾಗೂ ಕಲಘಟಗಿ ಮಹಾಜನತೆ ಉಪಸ್ಥಿತರಿದ್ದರು. ಎಲ್ಲರ ಅಥೀತ್ಯದಲ್ಲಿ ಜಾತ್ರಾ ಮಹೋತ್ಸವ ಉದ್ಘಾಟನೆಯಾಗಿದ್ದು, ಸತತ ಒಂಭತ್ತು ದಿನಗಳ ಕಾಲ ಜಾತ್ರೆ ನಡೆಯುತ್ತದೆ, ಸುತ್ತ-ಮುತ್ತಲಿನ ಹಳ್ಳಿಗರು ಸಾವಿರಾರು ಜನರು ಬಂದು ಪಾಲ್ಗೋಳ್ಳಲಿದ್ದಾರೆ.

Share News

About admin

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *