Breaking News

ಗಾಂಜಾ ಮಾರಾಟ : ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್ ಅಮಾನತು


ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದಿನ‌ ರಸ್ತೆಯಲ್ಲಿ ಇಬ್ಬರು ಕಾನ್ಸ್​ಟೇಬಲ್‌ ಗಾಂಜಾ ಮಾರಾಟ ಪ್ರಕರಣ ಸಂಬಂಧ‌ ಆರ್.ಟಿ.ನಗರ ಇನ್ಸ್​ಪೆಕ್ಟರ್ ಹಾಗೂ ಸಬ್ ಇನ್ಸ್​ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪ್ರಕರಣದ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿಲ್ಲ‌ ಎಂದು ಇನ್ಸ್​ಪೆಕ್ಟರ್ ಅಶ್ವತ್ಥ್ ಗೌಡ ಹಾಗೂ ಸಬ್ ಇನ್ಸ್​ಪೆಕ್ಟರ್ ವೀರಭದ್ರಯ್ಯ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಜನವರಿ 13ರಂದು ಸಿಎಂ ಮನೆ ಮುಂದೆ ಭದ್ರತೆಗೆ ನಿಯೋಜನೆಯಾಗಿದ್ದ ಕೋರಮಂಗಲ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ಗಳಾದ ಸಂತೋಷ್‌ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿತ್ತು. ಆರ್.ಟಿ.ನಗರದ 80ನೇ ಅಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಆರೋಪದಡಿ ಈ ಇಬ್ಬರು ಕಾನ್ಸ್​ಟೇಬಲ್​ಗಳು ಸೇರಿ ಐವರ ಬಂಧನವಾಗಿತ್ತು.

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *