ಮಹಿಳೆಯ ಕಿವಿ ಹರಿದು ಬರುವಂತೆ ಓಲೆ ಕಿತ್ತು ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆವಿಜಯಪುರ ಅಂಗಡಿಗೆ ತೆರಳಿದ್ದ ಮಹಿಳೆಯ ಮೇಲ್ ಹಲ್ಲೆ ಮಾಡಿ ಓಲೆ ಕಿತ್ತು ಆಕೆಯ ಕಿವಿಯನ್ನು ಕತ್ತರಿಸಿದ್ದರು.ಆ ಬಳಿಕ ಆಕೆಯ ಕಿವಿಯಲ್ಲಿದ್ದ ಓಲೆ ಮತ್ತು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.ಈ ಘಟನೆ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಹೀಗಾಗಿ ಆರೋಪಿಗಳ ಹೆಡೆಮುರಿ ಕಟ್ಟುವಂತೆ ಆಗ್ರಹ ಜೋರಾಗಿತ್ತು. ಇದೀಗ ಪೊಲೀಸರು ಈ ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಸಂಬಂಧ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

