Breaking News

ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ ಉತ್ತರ ನೀಡಿದ ಸಿಸಿ ಪಾಟೀಲ್

ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ಮತ್ತೆ ಪಕ್ಷಾಂತರದ ಗುಲ್ಲು ಎದ್ದಿರುವಾಗ ನಾಯಕರ ನಡುವೆ ವಾಕ್ ಸಮರಕ್ಕೂ ವೇದಿಕೆ ಸಿಕ್ಕಿದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಸಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿಸಿ ಪಾಟೀಲ್ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗದ ಉತ್ತರ ನೀಡಿದರು.

ಯಾವ ಕಾರಣಕ್ಕೂ ಅವರನ್ನ ವಾಪಸ್ ತಗೊಳೋದಿಲ್ಲ ಅಂತ ಹೇಳಿದ್ದು ಯಾರು..? ಬಿಟ್ಟು ಹೋದವರನ್ನ ವಾಪಸ್ ತಗೊಳೋದಿಲ್ಲ ಅಂತ ಗುದ್ದಿ ಹೇಳಿದವರು ಯಾರು? ಬಿಟ್ಟು ಹೋದವನ್ನ ಯಾವ ಕಾಲಕ್ಕೂ ವಾಪಸ್ ತಗೋಳೋದಿಲ್ಲ ಅಂತ ಇದೇ ಸಿದ್ದರಾಮಯ್ಯ ಹೇಳಿದ್ದರು. ಇನ್ನೂ ಒಂದು ವರ್ಷ ಆಗಿಲ್ಲ, ಈಗ ಹೀಗೆ ಹೇಳ್ತಾರೆ ಅಂದ್ರೆ ಅವರ ಅನಿವಾರ್ಯತೆ ಎಷ್ಟಿದೆ ಅವರ ಅಭದ್ರತೆ ಎಷ್ಟಿದೆ ಅಂತ ನೀವೇ ವಿಚಾರ ಮಾಡಿ. ವಾಪಸ್ ಹೋಗೋ ಬಗ್ಗೆ ನನಗೇನೂ ಸಂಶಯ ಇಲ್ಲಪ್ಪ ಎಂದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *