Breaking News

ಪ್ರತಾಪ್‌ಸಿಂಹ, ರಾಮದಾಸ್ ನಡುವೆ ಶೀತಲ ಸಮರ : ಬಿಜೆಪಿಯಲ್ಲಿ ಅಸಮಧಾನ



ಮೈಸೂರು : ರಾಮದಾಸ್ ಮೋದಿಗಿಂತ ಸೀನಿಯರ್.ಅವರಿಗಿಂತ ಬುದ್ದಿವಂತರು ಜ್ಞಾನಿಗಳು.ಕೇವಲ ಬ್ಯಾನರ್ ಅಲ್ಲಿ ಮೋದಿ ಪೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಆಗುವುದಿಲ್ಲ.ಮೋದಿ ಯೋಜನೆಗಳನ್ನು ವಿರೋಧಿಸಿದರೆ ಜನ ಪಾಠ ಕಲಿಸುತ್ತಾರೆ ಎಂದು
ಪ್ರತಾಪ್ ಸಿಂಹ ಹೇಳಿದರು.

ಸಂಸದ ಪ್ರತಾಪ್‌ಸಿಂಹ ಮತ್ತು ಶಾಸಕ‌ ಎಸ್.ಎ.ರಾಮದಾಸ್ ನಡುವೆ ಶೀತಲ ಸಮರ ಮುಂದುವರೆದಿದೆ. ಮನೆಮನೆಗೆ ಗ್ಯಾಸ್ ಸಂಪರ್ಕ ಯೋಜನೆಗೆ ಅನುಮತಿ ನೀಡದಂತೆ ಶಾಸಕ ರಾಮದಾಸ್ ಪತ್ರ ಬರೆದಿರುವುದಕ್ಕೆ ಪ್ರತಾಪ ಸಿಂಹ ಕೆಂಡಾಮಂಡಲರಾಗಿದ್ದಾರೆ.

ಯೋಜನೆಯನ್ನು ಕಾಂಗ್ರೆಸ್ ಜೆಡಿಎಸ್ ಶಾಸಕರು ವಿರೋಧಿಸಿಲ್ಲ. ನಮ್ಮದೇ ಪಕ್ಷದ ಶಾಸಕರು ವಿರೋಧಿಸಿದ್ದಾರೆ. ಅವರನ್ನು ತಾಯಿ ಚಾಮುಂಡೇಶ್ವರಿ, ಮೈಸೂರಿನ ಜನ ನೋಡಿಕೊಳ್ಳುತ್ತಾರೆ. ಈ ರೀತಿ ಚಿಲ್ಲರೆ ರಾಜಕಾರಣ ಮಾಡಬೇಡಿ. ಇದ್ಯಾವುದಕ್ಕೂ ನಾನು ಕೇರ್ ಮಾಡುವುದಿಲ್ಲ ಎಂದಿದ್ದಾರೆ.

ಕೆ.ಆರ್.ಕ್ಷೇತ್ರದ ಕಸವನ್ನ ಎತ್ತಿಸೋದು ನಾನೆ.ಈ ಯೋಜನೆಯನ್ನೂ ನಾನೆ ಪೂರ್ಣ ಮಾಡುತ್ತೇನೆ. ಯಾವುದಕ್ಕೂ ನಾನು‌ ಕೇರ್ ಮಾಡುವುದಿಲ್ಲ‌. ಎಂದು ಶಾಸಕ ರಾಮದಾಸ್‌ ಅವರಿಗೆ ಪ್ರತಾಪ್‌ಸಿಂಹ ತಿರುಗೇಟು ನೀಡಿದ್ದಾರೆ.

Share News

About admin

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *