Breaking News

ಶ್ಯಾವಿಗೆ ಪಾಯಸದಲ್ಲಿ ಹುಳು ಕಂಡು ಶಾಕ್ ಆದ ವಿದ್ಯಾರ್ಥಿಗಳು : ಸಿಎಂಗೆ ಮನವಿ

ಗದಗ: ನಗರದ ಬಾಲಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದಲ್ಲಿ ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಶಾಕ್‌ ಆಗಿದ್ದಾರೆ.ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರಿಗೂ ಮನವಿ ಮಾಡಿಕೊಂಡಿದ್ದಾರೆ.

ವಸತಿ ನಿಲಯದಲ್ಲಿ ಮಾಡಿದ ಪಾಯಸದ ತುಂಬೆಲ್ಲಾ ಹುಳುಗಳು ಕಾಣಿಸಿಕೊಂಡಿವೆ. ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ (ಜ.28) ರಾತ್ರಿ ಈ ಪಾಯಸ ಮಾಡಲಾಗಿತ್ತು. ಅದನ್ನು ನೋಡಿದ ವಿದ್ಯಾರ್ಥಿಗಳು ಅರೆಕ್ಷಣ ದಂಗಾಗಿದ್ದಾರೆ. ಏಕೆಂದರೆ ಅದರ ತುಂಬ ಹುಳುಗಳು ಇದ್ದವು! ಇನ್ನು ಕೆಲವು ವಿದ್ಯಾರ್ಥಿಗಳು ಸರಿಯಾಗಿ ಪಾಯಸ ಗಮನಿಸದೇ ಅದನ್ನು ಸೇವಿಸಿದ್ದು, ಇದೀಗ ಗಾಬರಿ ಬಿದ್ದಿದ್ದಾರೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *