Breaking News

ದೇಶದಲ್ಲಿ 2.34 ಲಕ್ಷ ಕೋವಿಡ್‌ ಪ್ರಕರಣ ಪತ್ತೆ

ನವದೆಹಲಿ : ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 2.34 ಲಕ್ಷ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 893 ಸೋಂಕಿತರು ಸಾವಿಗೀಡಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ 1.19ರಷ್ಟುಇಳಿಕೆ ಕಾಣುವ ಮೂಲಕ 18.84 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಜೊತೆಗೆ ದೈನಂದಿನ ಪಾಸಿಟಿವಿಟಿ ದರ ಶೇ.14.5ರಷ್ಟು ಮತ್ತು ವಾರದ ಪಾಸಿಟಿವಿಟಿ ದರ ಶೇ.16.4ರಷ್ಟಿದೆ. ಈವರೆಗೆ ದೇಶದಲ್ಲಿ 165.7 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ. ತನ್ಮೂಲಕ ಒಟ್ಟು ಪ್ರಕರಣಗಳು 4.10 ಕೋಟಿಗೆ ಮತ್ತು ಒಟ್ಟು ಸಾವು 4.94 ಲಕ್ಷಕ್ಕೆ ಏರಿಕೆಯಾಗಿವೆ

Share News

About admin

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *