Breaking News

ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಉದ್ಘಾಟನೆ


ಧಾರವಾಡ : ಕೆಎಎಸ್‌ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಆನ್‌ಲೈನ್‌ ಕ್ಲಾಸ್‌ಗಳ ಉದ್ಘಾಟನಾ ಸಮಾರಂಭ ನಡೆಯುತ್ತು. ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ನಡೆಸಲಾಗುವ 3 ತಿಂಗಳ KAS ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ತರಗತಿಗಳು ಫೆಬ್ರುವರಿ 02 ರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿವೆ.

ಈ ಸಂಬಂಧ ತರಗತಿಗಳ ಅಧಿಕೃತ ಉದ್ಘಾಟನಾ ಸಮಾರಂಭವು ಬೆಳಗ್ಗೆ 7 ಗಂಟೆಗೆ ನಡೆಯಲಿದೆ.ಈ ತರಗತಿಗಳ ಉದ್ಘಾಟನಾ ಸಮಾರಂಭವು ಧಾರವಾಡದ ಸಿಬಿ ನಗರದಿಂದ ಶ್ರೀನಗರ ಸರ್ಕಲ್‌ಗೆ ತೆರಳುವ ಮಧ್ಯದ ರಸ್ತೆಯಲ್ಲಿನ ಲಿಂಗಾಯತ ಭವನದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಸಿಗುವ ತುಂಗಾ ಭದ್ರಾ ಕಾಲೋನಿಯ ಎರಡನೇ ಅಡ್ಡ ರಸ್ತೆಯಲ್ಲಿರುವ ಸಂತೋಷ್‌ ಲಾಡ್‌ ಫೌಂಡೇಶನ್‌ ಸ್ಟುಡಿಯೊದಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಕಲಘಟಗಿ ಮತಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಸಂತೋಷ್‌ ಲಾಡ್‌ ಅವರು ಉಪಸ್ಥಿತರಿರುವರು.

ಈ ತರಗತಿಗಳನ್ನು ನಡೆಸಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪರಿಣತ ಅಧ್ಯಾಪಕರು ತರಗತಿಗಳನ್ನು ನಡೆಸಿಕೊಡಲಿದ್ದಾರೆ. Syllabuswise ಪ್ರತಿ ದಿನ 5 ತರಗತಿಗಳಂತೆ 3 ತಿಂಗಳು ನಡೆಯಲಿದೆ. ಬೆಳಗ್ಗೆ 8 ರಿಂದ 9, 9 ರಿಂದ 10, 10 ರಿಂದ11 ಹಾಗೂ ಸಂಜೆ 6 ರಿಂದ7 & 7 ರಿಂದ 8 ಗಂಟೆವರೆಗೆ ತರಗತಿಗಳು ನಡೆಯಲಿವೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಆಸಕ್ತರು ತರಗತಿಗಳನ್ನು ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ.

ಮಹತ್ವದ ಈ ಮಾಹಿತಿಯನ್ನು ತಮ್ಮ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಹಾಗೂ ಪ್ರಸಾರ ಮಾಡಬೇಕು ಎಂದು ಸವಿನಯ ಮನವಿ. ಹಾಗೂ ಉದ್ಘಾಟನಾ ಸಮಾರಂಭಕ್ಕೆ ತಮ್ಮ ಮಾಧ್ಯಮಗಳ ಪ್ರತಿನಿಧಿಗಳನ್ನು ಕಳುಹಿಸಿ ವರದಿ ಮಾಡಬೇಕು ಎಂದು ಮನವಿ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *