ಹುಬ್ಬಳ್ಳಿ: ಜಮೀರ್ ಅಹ್ಮದ್ ಒಬ್ಬ ಮತಾಂಧ ಶಕ್ತಿ, ಖರ್ಗೆ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಆಗೋವರ್ಗೆ ಸ್ವಲ್ಪ ಸುಮ್ಮನಿರಿ ಎಂದ ಹಾಗಿದೆ. ಕಾಂಗ್ರೆಸ್ನವರು ಮಹಾನ್ ಕಳ್ಳರು, ಖದೀಮರಿದ್ದಾರೆ. ಕಾಂಗ್ರೆಸ್ ಪಕ್ಷದ ಅಂತಹ ಕಳ್ಳರು ಜಗತ್ತಿನಲ್ಲಿ ಬುತ್ತಿ ಕಟ್ಟಿಕೊಂಡು ಹುಡುಕಾಡಿದರೂ ಸಿಗುವುದಿಲ್ಲವೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಖರ್ಗೆ ಅಸಮಾಧಾನ ವಿಚಾರಕ್ಕೆ ಜೋಶಿ ವ್ಯಂಗ್ಯವಾಡಿದರು. ಖರ್ಗೆ ಅವರ ಹೇಳಿಕೆ ನಂತರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗೊಂದಲದಲ್ಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಗ್ಯಾರಂಟಿ ಕೊಡ್ತಾರೆ ಅನ್ನೋದು ಖರ್ಗೆ ಅವರ ಮಾತಿಂದ ಸ್ಪಷ್ಟ ಆಗುತ್ತೆ. ಖರ್ಗೆ ಅವರ ಮಾತಿನ ಬಿಟ್ ವಿನ್ ಲೈನ್ ನೋಡಿ. ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಆಗೋವರ್ಗೆ ಸ್ವಲ್ಪ ಸುಮ್ಮನಿರಿ ಎಂದಹಾಗಿದೆ. ಆನಂತರ ಬೇಕಾದರೆ ನೀವು ರದ್ದು ಮಾಡುವುದಾದರೆ ಮಾಡಿ ಎನ್ನುವ ಮಾನಸಿಕತೆಯಲ್ಲಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

