ಹುಬ್ಬಳ್ಳಿ : ಓಲ್ಡ್ ಮಾಂಕ್ ಚಲನಚಿತ್ರವು ಇದೇ ದಿನಾಂಕ ೨೫ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ಹಾಗೂ ನಿರ್ದೇಶಕ ಎಂ.ಜಿ. ಶ್ರೀನಿವಾಸ ಹೇಳಿದರು.
ನಗರದ ಬಿವಿಬಿ ಕಾಲೇಜಿನಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಒಟ್ಟು ೪ ಹಾಡುಗಳು ಇದ್ದು, ಈಗಾಗಲೇ ಗಿಚ್ಚ ಗಿಲಿಗಿಲಿ ಹಾಡು ಜನಪ್ರೀಯಗೊಂಡಿದ್ದು,, ಉತ್ತರ ಕರ್ನಾಟಕದ ಜಾನಪದ ಶೈಲಿಯ ಹಾಡು ಇದಾಗಿದ್ದು ಯುವಕರ ಹಾಟ್ ಫೇವರೆಟ್ ಆಗಿದೆ. ಓಲ್ಡ್ ಮಾಂಕ್ ಚಿತ್ರವು ರೋಮಾಂಟಿಕ್ ಚಿತ್ರವಾಗಿದ್ದು, ಚಿತ್ರದ ಬಿಡುಗಡೆ ೧ ದಿನದ ಮುಂಚೆ ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ ನಗರದಲ್ಲಿ ಪ್ರೀಮಿಯರ್ ಶೋ ಮಾಡುವುದಾಗಿ ತಿಳಿಸಿದ ಅವರು, ೩ ಕೋಟಿ ವೆಚ್ಚದಲ್ಲಿ ಚಿತ್ರ ಸಿದ್ಧಗೊಂಡಿದೆ.
೧೦೦ ಥೇಯಟರ್ ಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದ್ದು, ಮುಂದಿನ. ದಿನಗಳಲ್ಲಿ ಥಿಯೇಟರ್ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು ಎಂದರು.
ನಾರದ ಕುರಿತು ಚಿತ್ರದ ಕಥೆ ಒಳಗೊಂಡಿದ್ದು, ಚಿತ್ರದ ಶೀರ್ಷಿಕೆಯಿಂದಲೆ ಹೆಚ್ಚು ಗಮನ ಸೆಳೆದಿದೆ. ಈ ಚಿತ್ರದ ನಂತರ ಹಾರರ್ ಸಿನಿಮಾ ಸೇರಿದಂತೆ ಇನ್ನೂ ಎರಡು ಚಿತ್ರಗಳು ಚಿತ್ರೀಕರಣಕ್ಕೆ ಸಿದ್ಧಗೊಂಡಿದೆ.
ಶಿವಕುಮಾರ್ ಅವರಿಗೆ ಸಿನಿಮಾ ಮಾಡಿಕೊಡುವುದಾಗಿ ತಿಳಿಸಿದರು.
ಚಿತ್ರದ ನಾಯಕಿ ಅದಿತಿ ಪ್ರಭುದೇವ್, ಎಸ್.ನಾರಾಯಣ್, ಸಿಹಿ-ಕಹಿ ಚಂದ್ರು ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.
ಸಂಗೀತ್ ಸೌರಭ, ಛಾಯಾಗ್ರಾಹಣ ಭರತ ಪರಶುರಾಮ, ಚಿತ್ರದ ನಿರ್ಮಾಪಕರು ಪ್ರದೀಪ ಶರ್ಮಾ, ಸೃಜನ್, ಸೌರಭ ಅವರನ್ನು ಒಳಗೊಂಡಿದೆ.
ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮಾತನಾಡಿ, ಉತ್ತರ ಕರ್ನಾಟಕದ ಕಲಾವಿದರಿಗೆ ಅವಕಾಶ ನೀಡಿದ್ದಾರೆ.ಬಿವಿಬಿ ಕಾಲೇಜಿನಲ್ಲಿ ಸಂದರ್ಶನ ಮಾಡಿ ಇಲ್ಲಿನ ಭಾಗದ ಕಲಾವಿದರಿಗೆ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭು ನವಲಗುಂದಮಠ ಸೇರಿದಂತೆ ಬಿವಿಬಿ ಕಾಲೇಜಿನ ಮುಖ್ಯ ಶಿಕ್ಷಕರು, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

