Breaking News

ಹರ್ಷ ದೇಶಕ್ಕೋಸ್ಕರ ಬಂದ ದೇಶಕ್ಕೋಸ್ಕರ ಹೋದ

ಶಿವಮೊಗ್ಗ: ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ, ಸಾಂತ್ವನ ಹೇಳಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ತಂದೆ, ತಾಯಿ ಹಾಗು ಅಕ್ಕ ಈ ವೇಳೆ ಮಾತನಾಡಿದರು.

‘ನನಗೇನು ಮಾಡಬೇಕು, ಹೇಳಬೇಕು ಗೊತ್ತಾಗ್ತಿಲ್ಲ. ಹರ್ಷ ದೇಶಕ್ಕೋಸ್ಕರ ಬಂದ ದೇಶಕ್ಕೋಸ್ಕರ ಹೋದ. ಎಲ್ಲರಲ್ಲೂ ಹರ್ಷನನ್ನು ಕಾಣುತ್ತಿದ್ದೇನೆ. ಎಲ್ಲರಿಗೂ ನಾವು ಚಿರಋಣಿ’ ಎಂದು ತಾಯಿ ಪದ್ಮ ಭಾವುಕರಾದರು.

‘ಎಲ್ಲ ಅಣ್ಣ-ತಮ್ಮಂದಿರಲ್ಲಿ ನನ್ನ ಸಹೋದರನನ್ನು ಕಾಣುತ್ತಿದ್ದೇವೆ. ನಮ್ಮ ಮೇಲೆ ಪ್ರೀತಿ ತೋರುತ್ತಿರುವುದಕ್ಕೆ ನಿಮಗೆಲ್ಲ ಧನ್ಯವಾದಗಳು. ಹರ್ಷ ಸಾವಿನ ಬಳಿಕ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನೆಲ್ಲ ನೋಡಿಕೊಂಡು ಬರುತ್ತೇವೆ. ಅವರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತೇವೆ’ ಎಂದು ಅಕ್ಕ ಅಶ್ವಿನಿ ತಿಳಿಸಿದರು.

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *