ಕುಂದಗೋಳ ತಾಲೂಕಿನ ಗುಡೇನಕಟ್ಟಿ ಬಾಯಿ ಬಿಟ್ಟ ಭೂಮಿ ಕಂಗಾಲಾದ ಅನ್ನದಾತ ಮಳೆರಾಯನ ಮುನಿಸುವಂತೆ ಗ್ರಾಮದ ರೈತರು,
ಕಂಗಾಲಾಗುವಂತಾಗಿದೆ ಈಗಾಗಲೇ ಅಶ್ವಿನಿ ಬರಣಿ ಪ್ರತೀಕ ರೋಹಿಣಿ ಮಗಶಿರ ಮಳೆಗಳು ಮುಖವನ್ನು ತೋರಿಸಿಲ್ಲ ಹೀಗಾಗಿ ರೈತಾಪಿ ವರ್ಗ ಮುಗಿಲಿನ ಕಡೆ ಮುಖ ಮಾಡಿ ಕುಳಿತಿದ್ದಾರೆ ಮಳೆ ದಾರಿ ನೋಡುತ್ತಾ ಕೈಚಳ್ಳಿ ಕುಳಿತಿರುವ ಗ್ರಾಮಸ್ಥರು ಗ್ರಾಮದ ದೇವರುಗಳ ಮರೆಹೋಗಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಬಿದ್ದ ಅಲ್ಪುಸಲ್ಪು ಮಳೆಗೆ ಭೂಮಿ ಹಸಿಯಾಗಿಲ್ಲ ಇದರಿಂದ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ ರೈತನ ಚಿಂತೆಯನ್ನು ನೋಡಿ ಮಾಗಶಿರ ಮಳೆಯಾದರೂ ಆಗಬಹುದು ಎಂದು ಗ್ರಾಮದ ಮಹಿಳೆಯರು ಮುತ್ತೈದಿಯರು ಗ್ರಾಮದ ದೇವರ ಮೊರೆ ಹೋಗಿದ್ದಾರೆ

ಈ ಮಳೆಯಾಗಿದ್ದರೆ ಶೇಂಗಾ ಹೆಸರು ಸುಯಬಿನ್ನ ಭೇಟಿ ಹತ್ತಿ ಮೆಣಸಿನ ಸಸಿ ಅಲಸಂದೆ ಉದ್ದು ಬಿತ್ತುವ ಕೆಲಸ ನಡೆಯುತ್ತಿತ್ತು ಆದರೆ ಈ ಮಳೆಯು ನಿರೀಕ್ಷೆಯಲ್ಲಿದ್ದ ರೈತರಿಗೀಗ ತೆಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ ಹೊಲಗಳೆಲ್ಲ ಅರಗಿ ಬಿತ್ತನೆಗೆ ಸಿದ್ಧಗೊಳಿಸಿದ್ದೇವೆ ಸಾಲ ಸೋಲ ಮಾಡಿ ಬೀಜ ಗೊಬ್ಬರಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ ಮಳೆರಾಯನಿಗಾಗಿ ಕಾಯುತ್ತಿದ್ದೇವೆ

ಆದರೆ ಮಳೆರಾಯ ಮಾತ್ರ ಕರುಣೆ ತೋರಿಸುತ್ತಿಲ್ಲ ಇದೇ ಸ್ಥಿತಿ ಮುಂದುವರೆದರೆ ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬುದು ರೈತನಿಗೆ ಚಿಂತೆಯಾಗಿದೆ ಎನ್ನುತ್ತಾರೆ ಗ್ರಾಮದ ರೈತ ಭರತೇಶ್ ಯೋಗಪ್ಪನವರು ಅಳಲು ತೋಡಿಕೊಳ್ಳುತ್ತಾರೆ ಒಟ್ಟಿನಲ್ಲಿ ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕಾಗಿದೆ ಅಲ್ಲದೆ ಬೆಳೆ ವಿಮೆ ಕೂಡಲೇ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ತೀರುವ ಅಧಿಕ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಬಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎನ್ನುತ್ತಾರೆ ರೈತ
ಮಹಿಳೆ ನಾಗವ್ವ ಎಮ್ಮಿ ತಾಯವ್ವ ಕೆಂಚಣ್ಣವರ ಮಾಯಪ್ಪ ಬೀರಣ್ಣವರ ಎಲ್ಲವ್ವ ಯೋಗಪ್ಪನವರು ಲಕ್ಷ್ಮವ್ವ ಪಿಡ್ಡಿ ಸರಸ್ವತಿ ಮಲ್ಲಿಗವಾಡ ಎಲ್ಲವ್ವ ಮಾದರ ಹಾಗೂ ಇನ್ನಿತರು ಒತ್ತಾಯಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





