Breaking News

ಬೆಂಗಳೂರು ಜನತೆಗೆ ಕ್ಷಮೆಯಾಚಿಸಿದ ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಕುಡಿಯುವ ನೀರಿಗೆ ಆಗ್ರಹಿಸಿ ನಡೆಸುತ್ತಿರುವಂತ ಪಾದಯಾತ್ರೆ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಕೆಂಗೇರಿಯಿಂದ ಆರಂಭಗೊಂಡಿರುವಂತ ಮೂರನೇ ದಿನದ ಪಾದಯಾತ್ರೆ, ಇಂದು ಬೆಂಗಳೂರು ತಲುಪಲಿದೆ.

ಈ ಹಿನ್ನಲೆಯಲ್ಲಿ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಜನತೆಯನ್ನು ಕ್ಷಮೆಯಾಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ನೀರಿಗಾಗಿ ಆಗ್ರಹಿಸಿ ನಡೆಯುತ್ತಿರುವಂತ ಪಾದಯಾತ್ರೆಯಿಂದಾಗಿ ಸಂಚಾರ ದಟ್ಟಣೆ ಮೈಸೂರು ರಸ್ತೆ, ಬೆಂಗಳೂರಿನಲ್ಲಿ ಉಂಟಾಗಲಿದೆ. ಸಮಸ್ಯೆ ಹಿನ್ನಲೆಯಲ್ಲಿ ಜನತೆಯನ್ನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *