Breaking News

ಏಕ್ ಲವ್ ಯಾಗೆ ಸಖತ್ ರೆಸ್ಪಾನ್ಸ್ ಖುಷಿಯಾಗಿದೆ : ರಕ್ಷಿತಾ

ಹುಬ್ಬಳ್ಳಿ:‌ಏಕ್ ಲವ್ ಯಾ ಸಿನಿಮಾ ರೆಸ್ಪಾನ್ಸ್ ತುಂಬ ಚೆನ್ನಾಗಿದೆ. ಹೌಸ್ ಫುಲ್ ಬೋರ್ಡ್ ನೋಡಿ ಬಹಳ ಖುಷಿಯಾಗಿದೆ ಎಂದು ಚಿತ್ರದ ನಿರ್ಮಾಪಕಿ ಹಾಗೂ ನಟಿ ರಕ್ಷಿತಾ ಪ್ರೇಮ್ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿರ್ಮಾಪಕಿಯಾಗಿ ತುಂಬಾ ಖುಷಿಯಾಗಿದೆ. ಮೊದಲು ಮೈಸೂರು ಮಂಡ್ಯ, ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮೋಷನ್ ಗೆ ಬಂದಿದ್ದೆವೆ. ಇಲ್ಲಿಯೂ ಕೂಡಾ ಸಿನಿಮಾ ಹೌಸ್ ಫುಲ್ ಆಗಿದೆ ಎಂದರು.

ನಂಗೆ ಭಯ ಇತ್ತು ನನ್ನ ತಮ್ಮನನ್ನು ಜನ ಒಪ್ಪಿಕೊಳ್ಳುತಾರೋ ಇಲ್ವೋ ಅಂತ. ಕೊನೆಗೂ ಜನ ಒಪ್ಕೊಂಡಿದ್ದಾರೆ. ಹೀಗಾಗೇ ತುಂಬಾ ಖುಷಿಯಾಗಿದೆ. ಎಲ್ಲರೂ ದಯವಿಟ್ಟು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ. ಫೈರಸಿ ಬಹಳ ಜೋರಾಗಿದೆ, ಫೈರಸಿ ಮಾಡಬಾರದು. ಟೆಲಿಗ್ರಾಂ ನಲ್ಲಿಯೂ ಕೂಡಾ ಲಿಂಕ್ ಲೀಕ್ ಆಗ್ತಿದೆ. ಯಾವುದೇ ಚಿತ್ರ ಇರಲಿ ಥಿಯೇಟರ್ ಗೆ ಹೋಗಿ ನೋಡಿ. ಫೈರಸಿ ಯಿಂದ ತುಂಬಾ ಬೇಜಾರ ಆಗ್ತಿದೆ ಎಂದು ಅವರು ಹೇಳಿದರು.

Share News

About admin

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *