ಕೆಪಿಸಿಸಿ ಆದೇಶದಂತೆ ಇಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ 30 ರಲ್ಲಿ, ಗಗನಕ್ಕೇರಿರುವ ಪೆಟ್ರೋಲ್/ಡಿಸೇಲ್/ಗ್ಯಾಸ್/ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸಿಲಿಂಡರ್ ಹಾಗೂ ದ್ವಿಚಕ್ರ ವಾಹನಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜೆನ್ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ನವೀದ್ ಮುಲ್ಲಾ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶ್ರೀ ಸಿದ್ಧೇಶ್ವರ ಕಾರದಕಟ್ಟಿ, ಶ್ರೀ ಉಮೇಶ ಕುಂಬಾರ,ಶ್ರೀಮತಿ ಶೋಭಾ ಕಾರದಕಟ್ಟಿ, ಶ್ರೀ ರಮೇಶ ಪೂಜಾರ ಹಾಗೂ ಶ್ರೀ ಜಮೀರ ಹುಡೇದ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

