ಮಹಿಳಾ ಡ್ಯಾನ್ಸರ್ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.ಮುಂಬೈ ಪೊಲೀಸರು ಣೇಶ್ ಆಚಾರ್ಯ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಪ್ರಕರಣದ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಕೋ -ಡ್ಯಾನ್ಸರ್ 2020 ರಲ್ಲಿ ಆಚಾರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದರು .
ಈ ಪ್ರಕರಣವನ್ನು ಓಶಿವಾರಾ ಪೊಲೀಸ್ ಅಧಿಕಾರಿ ಸಂದೀಪ್ ಶಿಂಧೆ ತನಿಖೆ ನಡೆಸಿದ್ದರು.ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ . ನನಗೆ ಅಶ್ಲೀಲ ಸಂದೇಶ , ಪೋರ್ನ್ ವಿಡಿಯೋ ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂದು ಗಣೇಶ್ ಆಚಾರ್ಯ ವಿರುದ್ಧ ಡ್ಯಾನ್ಸರ್ ಆರೋಪ ಮಾಡಿದ್ದಾರೆ.ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಇತ್ತೀಚಿಗೆ ವೈರಲ್ ‘ ಪುಷ್ಪ ‘ ಸಿನಿಮಾದ ಊ ಅಂತೀಯಾ ಮಾವ ಉ ಹೂಂ ಅಂತೀಯಾ ಹಾಡಿನ ಕೊರಿಯೋಗ್ರಫಿ ಮಾಡಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

