Breaking News

ಫಲ್ಗುಣಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಮಂಗಳೂರು: ಅನ್ನೋಡಿ ಎಂಬಲ್ಲಿ ಫಲ್ಗುಣಿ ನದಿ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕುತ್ತಿಗೆಗೆ ಶೂ ಲೇಸ್ ನಿಂದ ಬಿಗಿದು ಇನ್ನೊಂದು ಬದಿಯನ್ನುಇಂಟರ್ ಲಾಕ್ ಕಲ್ಲಿಗೆ ಬಿಗಿದು ಕಟ್ಟಲಾಗಿದೆ. ಮೃತದೇಹದಲ್ಲಿ ಬೇರೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಲ ಕೈಯಲ್ಲಿ ಶಿಲುಬೆ ಚಿಹ್ನೆ, ಹಾರ್ಟ್ ಗುರುತು ಹಾಗೂ ಒಳಗೆ ಇಂಗ್ಲಿಷ್ ನಲ್ಲಿ ‘ಆರ್’ ಎಂದು ಇನ್ನೊಂದು ಅಕ್ಷರ ‘ಆರ್’ ಅಥವಾ ‘ಕೆ’ ಯಂತೆ ಕಾಣುತ್ತಿದೆ. ದೇಹದಲ್ಲಿ ವಿವಿಧ ಬಣ್ಣಗಳಿರುವ ಉದ್ದ ತೋಳಿನ ಶರ್ಟ್, ಬೂದು ಬಣ್ಣದ ಟ್ರ್ಯಾಕ್ ಪ್ಯಾಂಟ್ ಇದೆ. ಸಾಧಾರಣ ಶರೀರವಿದೆ. ವ್ಯಕ್ತಿಯ ಮಾಹಿತಿ ಇದ್ದಲ್ಲಿ ಪಣಂಬೂರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *