Breaking News

ವ್ಯಕ್ತಿ ಆತ್ಮಹತ್ಯೆ : ದೂರ ದಾಖಲಿಸಲು ನಿರಾಕರಿಸಿದ ಪೋಲಿಸರು



ಕಲಘಟಗಿ : ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಘಟಗಿಯಲ್ಲಿ ನಡೆದಿದೆ .

ತಾಲೂಕಿನ ಗಾಂಧಿ ನಗರ ನಿವಾಸಿ ಹನುಮಂತಪ್ಪ ಮೃತ ವ್ಯಕ್ತಿ ಹನುಮಂತಪ್ಪ ಹಾಗೂ ದುರ್ಗಮ್ಮದಂಪತಿಗೆ ಪಕ್ಕದಲ್ಲಿ ವಾಸವಿರುವ ಶಾಂತವ್ವ ಹಾಗೂ ಆಕೆಯ ಗಂಡ ನಿರಂತರ ಕಿರುಕುಳ ಕೊಡ್ತಿದ್ದರ ಎನ್ನಲಾಗಿದೆ .

ಈ ಎರಡೂ ಕುಟುಂಬದ ಜಗಳ ಅನೇಕ ಬಾರಿ ಪೊಲೀಸ್ ಠಾಣೆವರೆಗೂ ಹೋಗಿ ನಂತರ ಹಿರಿಯರ ಮೂಲಕ ಬಗೆಹರಿಸಲಾಗಿತ್ತು . ಆದರೆ ನಿನ್ನೆ ಮತ್ತೆ ಜಗಳ ನಡೆದು ಜೀವ ಬೆದಿರಕೆವರೆಗೂ ಹೋಗಿದೆ . ಇದರಿಂದಾಗಿ ಮನನೊಂದ ಹನಮಂತಪ್ಪ ಖಾಸಗಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ . ಇನ್ನು ದೂರು ದಾಖಲಿಸಲು ಮೃತನ ಪತ್ನಿ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ದೂರು ತೆಗೆದುಕೊಳ್ಳಲು ನಿರಾಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದುರ್ಗಮ್ಮ ಆರೋಪಿಸಿದ್ದಾಳೆ . ಪೊಲೀಸರ ವಿರುದ್ಧ ಧರಣಿ ನಡೆಸಲು ಮುಂದಾದಾಗ ಕಲಘಟಗಿ ಸಿ . ಪಿ.ಐ ಪ್ರಭು ಸಮಾಧಾನ ಪಡೆಸಿ ತನಿಖೆ ಕೈಗೊಳ್ಳುವುದಾಗಿ ಹೇಳಿದ್ದಾರೆ .

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *