Breaking News
Oplus_131072

ಅಪಘಾತ : ಬೈಕ್‌ಗಳು ಡಿಕ್ಕಿಯಾಗಿ ಫುಡ್ ಡಿಲಿವರಿ ಬಾಯ್ ಸ್ಥಳದಲ್ಲೇ ಸಾವು!!

ನಗರದ ಎಸ್‌ಬಿಎಂ ಲೇಔಟ್‌ನ ಶರಾವತಿ ಬಡಾವಣೆಯ ನಿವಾಸಿ ಶರತ್ ಮೃತಪಟ್ಟ ವ್ಯಕ್ತಿ. ರಾತ್ರಿ 11 ಗಂಟೆ ಸುಮಾರಿನಲ್ಲಿ ಫುಡ್ ಡಿಲಿವರಿ ಮಾಡಲು ನಗರ ಕಡೆಯಿಂದ ಬಂದು ಗೆಂಡೆಗಟ್ಟೆಗೆ ಹೋಗುವ ರಸ್ತೆ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಕೆಳಗೆ ಬಿದ್ದ ಶರತ್‌ಗೆ ಗಂಭೀರವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಂದು ಬೈಕ್‌ ಸವಾರನಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಿವಮೊಗ್ಗ: ಯುವತಿಯರ ಮೇಲೆ ಪಟಾಕಿ ಎಸೆದು ರೌಡಿ ಪುಂಡಾಟ; ಎಸ್ಪಿ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ

ಶಿವಮೊಗ್ಗ ನಗರದ ಹೊರವಲಯದ ಹರಿಗೆ ಗ್ರಾಮದಲ್ಲಿ ನಿರಂಜನ್ ಅಲಿಯಾಸ್ ಶಕೆ ಎಂಬ ಪುಡಿ ರೌಡಿ ಹಾಗೂ ಆತನ ಸಹಚರರು ಯುವತಿಯರ …

Leave a Reply

Your email address will not be published. Required fields are marked *