.
ಲಕ್ಷ್ಮೇಶ್ವರ : ಪಟ್ಟಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನಿಂದ 10 ಲಕ್ಷ ರೂ.ಗಳ ಹಣವನ್ನು ತೆಗೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿಯೋರ್ವ ಆ ಹಣವನ್ನು ಎಗರಿಸಿಕೊಂಡು ಹೋಗಿರುವ ಘಟನೆ ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಪ್ರಾಗಂಣದಲ್ಲಿ ನಡೆದಿದೆ.
ಪಟ್ಟಣದ ರಾಜೇಂದ್ರ ಕಾಟನ್ ಇಂಡಸ್ಟ್ರೀಸನಲ್ಲಿ ಹಲವಾರು ವರ್ಷಗಳಿಂದ ಕಾರಕೊನನಾಗಿ ಸೇವೆ ಸಲ್ಲಿಸುತ್ತಿರುವ ರಾಮನಗೌಡ್ರ ಫಕ್ಕಿರಗೌಡ್ರ ಪಾಟೀಲ್ ಎನ್ನುವವರೆ ಹಣ ಕಳೆದುಕೊಂಡ
ದುರ್ದೈವಿಯಾಗಿದ್ದಾರೆ ಶುಕ್ರವಾರ ಸಂಜೆ 4 ರಿಂದ 4.30 ರೊಳಗೆ ಈ ಘಟನೆ ನಡೆದಿದ್ದು ರಾಜೇಂದ್ರ ಕಾಟನ ಇಂಡಸ್ಟ್ರೀಜನಲ್ಲಿ ಗ್ರಾಹಕರಿಗೆ ನೀಡಲು ಸ್ಟೇಟ್ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿ ಚೀಲದಲ್ಲಿ ಹಾಕಿಕೊಂಡು ದ್ವಿಚಕ್ರವಾಹನದ ಸೈಡ ಬ್ಯಾಗನಲ್ಲಿ ಇಟ್ಟುಕೊಂಡು ಹೊರಟ್ಟಿದ್ದ ವೇಳೆ ಯಾವುದೋ ವಾಹನ ಅಡ್ಡ ಬಂದಾಗ ತಮ್ಮ ವಾಹನ ನಿಧಾನ ಮಾಡಿದ
ವೇಳೆಯಲ್ಲಿ ಹೊಂಚು ಹಾಕುತ್ತಿದ್ದ ಖದೀಮರು ಕ್ಷಣ ಮಾತ್ರದಲ್ಲಿ ಹಣವನ್ನು ಲಪಟಾಯಿಸಿದ್ದಾರೆ ಎಸಬಿಐ ನಿಂದ ಕೆಲವೇ ಮೀಟರ ದೂರದಲ್ಲಿ ಅಂದರೆ ಎಪಿಎಂಸಿ ಎದುರುಗಡೆಯ ರಸ್ತೆಯಲ್ಲಿಯೇ ಈ ಘಟನೆ ನಡೆದಿದ್ದು
ವ್ಯಾಪಾರಸ್ಥರು ಮತ್ತು ಜನರಲ್ಲಿ ಭಯ ಹುಟ್ಟಿಸಿದಂತಾಗಿದೆ.
ಹಣ ಕಳೆದುಕೊಂಡ ವ್ಯಕ್ತಿ ರಾಮನಗೌಡ್ರ ಅವರು ಹೇಳಿಕೆ ನೀಡಿ ಪ್ರತಿ ದಿನದಂತೆ ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗುವದು ಮಾಡುವದು ವಾಡಿಕೆ ಅದರಂತೆ ಇಂದು ಸಹ ಹಣವನ್ನು ಡ್ರಾ ಮಾಡಿ ವಾಹನದ ಬ್ಯಾಗನಲ್ಲಿ ಇಟ್ಟುಕೊಂಡು ಹೋಗುತ್ತಿರುವಾಗ
ನನಗೆ ತಿಳಿಯದಂತೆ ಹಣವನ್ನು ಬ್ಯಾಗನಿಂದ ಎಗರಿಸಿದ್ದಾರೆ ಎಂದು ಕಣ್ಣೀರಿಡುತ್ತಾ ವರದಿಗಾರರ ಮುಂದೆ ಗೋಳು ತೋಡಿಕೊಂಡರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಿಎಸ್.ಐ ಡಿ ಪ್ರಕಾಶ ಅವರು ಪರಿಶೀಲನೆ ನಡೆಸಿದರು ನಂತರ ಸಿಪಿಐ ವಿಕಾಶ ಲಮಾಣಿಯವರು ಸ್ಥಳಕ್ಕೆ ದೌಡಾಯಿಸಿ ಸುತ್ತಮುತ್ತಲಿನ ಸಿಸಿ ಟಿವ್ಹಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಪರಿಶೀಲನೆ ನಡೆಸಿದರು. ಸಿಸಿ ಟಿವ್ಹಿಯಲ್ಲಿ ಹಣ ಎಗರಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದು ಅವುಗಳನ್ನು ಪಡೆದುಕೊಂಡಿರುವ ಕಳ್ಳರ ಮಾಹಿತಿ ಇದರಿಂದ ಲಭ್ಯವಾಗಲಿದ್ದು ಆದಷ್ಟು ಶೀಘ್ರ ಖದೀಮರನ್ನು ಬಂದಿಸುತ್ತೇವೆ ಎಂದು ಹೇಳಿದರು.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

