ನವದೆಹಲಿ : ವೇಶ್ಯಾವಾಟಿಕೆ ಕಾನೂನು ಬದ್ಧ ಎಂಬ ತೀರ್ಪು ನೀಡಿದೆ . ಜತೆಗೆ ಪೊಲೀಸರು ವೇಶ್ಯಾವಾಟಿಕೆ ಸಂಬಂಧ ಮಧ್ಯಪ್ರವೇಶಿಸುವಂತಿಲ್ಲ ವರ ಲೆ ಕ್ರಮ ಕೈಗೊಂಡರೆ ಪೊಲೀಸರ ವಿರುದ್ಧವೇ ಕ್ರಿಮಿನಲ್

ಮೊಖದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದೆ .ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ . ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರ ಅಧ್ಯಕ್ಷತೆಯ ಪೀಠ ಇಂದು ಆದೇಶ ನೀಡಿದೆ .
ವೇಶ್ಯಾವಾಟಿಕೆಯಲ್ಲಿ ತೊಡಗಿದ ಮಹಿಳೆಯರ ಹಕ್ಕುಗಳ ರಕ್ಷಣೆ ಕುರಿತಂತೆ ಆರು ನಿರ್ದೇಶನಗಳನ್ನು ಕೋರ್ಟ್ ನೀಡಿದೆ . ” ವೇಶ್ಯಾವಾಟಿಕೆಯಲ್ಲಿ ಭಾಗಿಯಾದ ಮಹಿಳೆಯರಿಗೆ ಸಮಾಜದ ಪ್ರತಿಯೊಬ್ಬರಿಗೂ ಸಿಗಬೇಕಾದ ರಕ್ಷಣೆಯ ಹಕ್ಕಿದೆ . ಕ್ರಿಮಿನಲ್ ಮೊಕದ್ದಮೆ ಹೂಡುವಾಗ ಅವರ ವಯಸ್ಸು ಮತ್ತು ಅವರು ಸ್ವ ಇಚ್ಛೆಯಿಂದ

ಭಾಗಿಯಾಗಿದ್ದಾರೆ ಎಂಬ ಬಗ್ಗೆ ತಿಳಿದುಕೊಳ್ಳಬೇಕು . ಒಂದು ವೇಳೇ ಸ್ವಂತ ನಿರ್ಧಾರದ ಮೇಲೆ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡುವ ಹಕ್ಕು ಪೊಲೀಸರಿಗಿಲ್ಲ . ಅನಗತ್ಯ ಮಧ್ಯಪ್ರವೇಶ ಮಾಡುವುದನ್ನು ಕೋರ್ಟ್ ಸಹಿಸುವುದಿಲ್ಲ . ವೇಶ್ಯಾವಾಟಿಕೆಯೂ ಒಂದು ವೃತ್ತಿ . ದೇಶದ ಪ್ರತಿ ನಾಗರಿಕನಿಗೆ ಸಿಗುವ ರಕ್ಷಣೆ , ಹಕ್ಕು ಮತ್ತು ಗೌರವ ಈ ಮಹಿಳೆಯರಿಗೂ ದೊರೆಯಬೇಕು , ” ಎಂದು ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ .

bigtvnews | Hubli Dharwad News | Kannada News | Karnataka News Hubli News | News In Hubli | Local news

