ಅಕ್ರಮಗಣಿಗಾರಿಕೆ ಹಗರಣದಡಿಯಲ್ಲಿ ತನಿಖೆ ನಡೆಸುವ ವೇಳೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕ ಎಂದು ಹೇಳಲಾದ ಪ್ರೇಮ್ ಪ್ರಕಾಶ್ ಅವರ ನಿವಾಸದಲ್ಲಿ 2 ಎಕೆ -47 ರೈಫಲ್‌ಗಳು ಪತ್ತೆಯಾದ ಬೆನ್ನಲ್ಲೇ ಪ್ರೇಮ್ ಪ್ರಕಾಶ್ ಅವರನ್ನು ಬಂಧಿಸಲಾಗಿದೆ.
ಬುಧವಾರ ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಎರಡು ಎಕೆ-47 ರೈಫಲ್‌ಗಳು ಮತ್ತು 60 ಕಾಟ್ರಿಡ್ಜ್‌ಗಳನ್ನು ಇಡಿ ವಶಪಡಿಸಿಕೊಂಡಿದೆ. 100 ಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರೇಮ್ ಪ್ರಕಾಶ್ ಅವರ ಜಾರ್ಖಂಡ್ ನಿವಾಸವನ್ನು ಶೋಧಿಸುವಾಗ ಇಡಿ ಅಧಿಕಾರಿಗಳು ಕಬ್ಬಿಣದ ಅಲ್ಮಿರಾದಲ್ಲಿ ಎರಡು ಎಕೆ -47 ಗಳನ್ನು ಇರಿಸಿರುವುದು ಪತ್ತೆಯಾಗಿದೆ ಎಂದು ಹೇಳಿದ್ದರು.
ಈ ಕುರಿತು ಬಿಜೆಪಿಯ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರು ಟ್ವೀಟ್ ಮಾಡಿದ್ದು “ಪ್ರೇಮ್ ಪ್ರಕಾಶ್ ಅವರನ್ನು ಇಡಿ ಬಂಧಿಸಿದೆ. ಪ್ರಕಾಶ್ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಕುಟುಂಬ ಸ್ನೇಹಿತ ಅಮಿತ್ ಅಗರ್ವಾಲ್ ಅವರ ಸಹವರ್ತಿಯಾಗಿದ್ದು, ಅವರ (ಪ್ರಕಾಶ್) ಲಿಂಕ್‌ಗಳನ್ನು ತನಿಖೆ ಮಾಡಬೇಕು” ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

