Breaking News

ತಮಿಳು ನಟಿ ದೀಪಾ ಆಕಾ ಆತ್ಮಹತ್ಯೆ


ಚೆನ್ನೈ; ತಮಿಳು ನಟಿ ದೀಪಾ ಆಕಾ (ಪಾಲಿನ್ ಜೆಸ್ಸಿಕಾ, 29 ವಯಸ್ಸು) ಭಾನುವಾರ ಚೆನ್ನೈನ ವೀರುಗಾಂಬಿಕಾಂ ನಗರದಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ. ದೀಪಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೀಪಾ ಅವರು ನಾಸಿರ್ ಮುಖ್ಯಪಾತ್ರದಲ್ಲಿದ್ದ ‘ವೈದಾ’ ಸಿನಿಮಾದಲ್ಲಿ ನಾಯಕಿಯಾಗಿದ್ದರು. ‘ಥುಪ್ಪಾರುವಿಲನ್’ ಸೇರಿದಂತೆ ಕೆಲ ಚಿತ್ರಗಳಲ್ಲಿ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ್ದರು. ತಮಿಳು ಚಿತ್ರ ಸಾಹಿತಿ ಕಾಬಿಲನ್ ಅವರ ಪುತ್ರಿ ಕೂಡ ಕಳೆದ ಐದು ದಿನದ ಹಿಂದೆ ಪ್ರೇಮ ವೈಪಲ್ಯದಿಂದ ಮೃತಪಟ್ಟಿದ್ದರು ಎಂದು ಇಂಡಿಯಾ ಗ್ಲಿಟ್ಜ್ ವರದಿ ಮಾಡಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *