Breaking News

ಮೊರ್ಬಿ ಕೇಬಲ್​ ಸೇತುವೆ ದುರಂತ : 12 ಜನ ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ

ಮೊರ್ಬಿ, ಗುಜರಾತ್​: ಮೊರ್ಬಿ ಕೇಬಲ್​ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಇದುವರೆಗೆ 141ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಸ್ಥಳೀಯರ ಪ್ರಕಾರ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಈ ದುರಂತದಲ್ಲಿ ಬಿಜೆಪಿ ಸಂಸದ ತಮ್ಮ 12 ಜನ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ.

ಈ ದುರಂತದ ಬಗ್ಗೆ ಮಾತನಾಡಿದ ರಾಜ್‌ಕೋಟ್ ಬಿಜೆಪಿ ಸಂಸದ ಮೋಹನ್‌ಭಾಯ್ ಕುಂದರಿಯಾ, ಈ ಘಟನೆ ಅತ್ಯಂತ ದುಃಖಕರವಾಗಿದೆ. ನಾನು ನಿನ್ನೆ ಸಂಜೆಯಿಂದ ಇಲ್ಲಿದ್ದೇನೆ. ಇಲ್ಲಿಯವರೆಗೆ ನೂರಾರು ಜನರ ಶವಗಳು ಪತ್ತೆಯಾಗಿವೆ. ಈ ದುರಂತದಲ್ಲಿ ನಮ್ಮ ಸಂಬಂಧಿಕರು ಸಹ ಸಾವನ್ನಪ್ಪಿದ್ದಾರೆ. ನನ್ನ ಸೋದರ ಮಾವನ ನಾಲ್ಕು ಹೆಣ್ಮಕ್ಕಳು, 3 ಅಳಿಯಂದಿರು ಮತ್ತು 5 ಮಕ್ಕಳನ್ನು ಕಳೆದುಕೊಂಡಿದ್ದೇವೆ ಎಂದರು.

ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡುವುದಿಲ್ಲ. ಈ ಅಪಘಾತದ ಸತ್ಯಾಸತ್ಯತೆ ಶೇ.100 ಹೊರಬರಲಿದೆ. ಪ್ರಧಾನಿ ಮೋದಿ ಕೂಡ ಈ ವಿಷಯದ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ರಾತ್ರಿಯಿಡೀ ಫೋನ್‌ನಲ್ಲಿ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದರು ಎಂದು ಹೇಳಿದರು.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *