ನವದೆಹಲಿ: ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್-19 ಮಹಾಮಾರಿ ಇನ್ನೂ ಸಂಪೂರ್ಣ ವಾಗಿ ಕೊನೆಯಾಗದಿರುವ ಹೊತ್ತಿನಲ್ಲಿ ಕರೊನಾದ ಒಮಿಕ್ರಾನ್ ಪ್ರಭೇದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ತಳಿಯೊಂದು ಪತ್ತೆಯಾಗಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ.
ಮೂರು ವರ್ಷಗಳ ಹಿಂದೆ ದಾಂಗುಡಿಯಿಟ್ಟ ಕರೊನಾ ವೈರಸ್ನ ಒಮಿಕ್ರಾನ್ ಪ್ರಭೇದ ಮನುಕುಲಕ್ಕೆ ದುಃಸ್ವಪ್ನವಾಗಿ ಕಾಡಿತ್ತು. ಬಹುತೇಕ ವಾರಕ್ಕೊಂದು ಎನ್ನುವಂತೆ ಅದರ ಹೊಸ ಹೊಸ ತಳಿಗಳು ಪತ್ತೆಯಾಗಿ ವಿಜ್ಞಾನ ಹಾಗೂ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿತ್ತು.
ಇದೀಗ ಅದಕ್ಕಿಂತಲೂ ಅಧಿಕ ಅಪಾಯಕಾರಿಯಾದ ವೈರಸ್ ತಳಿ ಪತ್ತೆಯಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಪತ್ತೆಯಾಗಿರುವ ಹೊಸ ಪ್ರಭೇದವು ಹಾಲಿ ಒಮಿಕ್ರಾನ್ ತಳಿಗಿಂತ ಭೀಕರವಾದ ಅನಾರೋಗ್ಯಕ್ಕೆ ಕಾರಣವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ವೈರಾಣು ರೂಪಾಂತರಗೊಂಡು ತುಲನಾತ್ಮಕವಾಗಿ ಮೃದುವಾದ ಒಮಿಕ್ರಾನ್ಗಿಂತ ಹೆಚ್ಚು ಅನಾರೋಗ್ಯ ಹಾಗೂ ಸಾವುಗಳಿಗೆ ಕಾರಣವಾಗಬಹುದು ಎಂದು ದಕ್ಷಿಣ ಆಫ್ರಿಕಾದ ತಜ್ಞರು ಎಚ್ಚರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

