ಹುಬ್ಬಳ್ಳಿ: ಪ್ರಧಾನಿ ಮೋದಿಗೆ ಮುಸ್ಲಿಮರ ಹೆಂಡ್ತಿಯರ ಚಿಂತೆ. ರಾಮ ಮಂದಿರ ಚಿಂತೆ ಇಲ್ಲ. ಮೋದಿಗೆ ತನ್ನ ಹೆಂಡತಿ ಬಗ್ಗೆಯೇ ಗೊತ್ತಿಲ್ಲ. ಮುಸ್ಲಿಂಮರ ಹೆಂಡ್ತಿ ಬಗ್ಗೆ ಮಾತನಾಡುತ್ತಾರೆ. ಮೋದಿ ಹೆಂಡತಿಗೆ ಜೀವನಾಂಶ ಕೊಡ್ತಾ ಇದ್ದಾರಾ ಏನು ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಯೋಧ್ಯೆ ವಿವಾದವನ್ನು ಬಗೆಹರಿಸುವ ಇಚ್ಛಾ ಶಕ್ತಿ ಬಿಜೆಪಿಗಿಲ್ಲ. ಅಯೋಧ್ಯೆ ವಿಷಯ ಇಟ್ಟುಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನವನ್ನ ಇಟ್ಟುಕೊಂಡು ಬಿಜೆಪಿಯವರು ಮತಗಳನ್ನ ಕೇಳ್ತಿದ್ರು. ಈಗ ಅಯ್ಯೋಧ್ಯೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಇದು ದುರದೃಷ್ಟಕರ. ಈಗಿನ ರಾಜಕೀಯ ಬಹಳ ಕೀಳು ಮಟ್ಟ ತಲುಪಿದೆ ಎಂದರು.ಇವತ್ತು ದೇಶದಲ್ಲಿ ಜನ ದಿನನಿತ್ಯ ಬದುಕುವುದು ಕಷ್ಟವಾಗಿದೆ. ಬಿಜೆಪಿಯವರು ಹಿಂದೂ ಹಿಂದೂ ಅಂತಾರೇ. ಊಟ ಇಲ್ಲದವರಿಗೆ ಊಟ, ಮನೆ ಇಲ್ಲದವರಿಗೆ ಮನೆ ಕೊಡುವುದೇ ಧರ್ಮ. ಬಿಜೆಪಿಯವರು ಗೋ ಸಂರಕ್ಷಣೆ ಅಂತಾರೇ, ಉತ್ತರ ಪ್ರದೇಶದಲ್ಲಿ ಗೋ ಪೂಜೆ ಮಾಡ್ತಾರೆ. ಆದ್ರೆ ಗೋವಾದಲ್ಲಿ ಏನೂ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋ ಮಾಂಸ ರಪ್ತು ಹೆಚ್ಚಾಗಿದ್ದು, ಇದಕ್ಕೆಲ್ಲ ಹೊಣೆ ಬಿಜಿಪಿ ಅವರೆ ಎಂದು ಇಬ್ರಾಹಿಂ ಆರೋಪಿಸಿದರು.ರಾಜ್ಯದಲ್ಲಿ ನಡೆಯುತ್ತಿರುವ ಐದು ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಗೆಲುವು ಖಚಿತ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷ ಗೆಲವು ಸಾಧಿಸುತ್ತದೆ. ರಾಮನಗರದಲ್ಲಿ ಬಿಜೆಪಿಗೆ ಅಭ್ಯರ್ಥಿನೇ ಇಲ್ಲದಾಗಿದೆ. ಬಿಜೆಪಿಯಿಂದ ದೇಶದ ಏಕತೆ ಹಾಳಾಗುತ್ತಿದೆ. ಅಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ’ ಎಂದು ಸಿ.ಎಂ.ಇಬ್ರಾಹಿಂ ಕಿಡಿಕಾರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





