Breaking News

ಬೆಂಗಳೂರಲ್ಲಿ 1 ತಿಂಗಳ ಗಂಡು ಮಗುವನ್ನು ದೇಗುಲದಲ್ಲಿ ಬಿಟ್ಟು ಹೋದ ಪಾಪಿಗಳು!

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಗಟ್ಟಿಗುಂದ ಗ್ರಾಮದ ಬಳಿ ಒಂದು ತಿಂಗಳು ಹಸುಗೂಸನ್ನು ಪಾಪಿಗಳು ದೇಗುಲದಲ್ಲಿ ಬಿಟ್ಟು ಹೋಗಿದ್ದಾರೆ. ಸೇವಾಲಾಲ್ ದೇವಸ್ಥಾನದ ಬಳಿ ಪಾಪಿಗಳು ಒಂದು ತಿಂಗಳ ಗಂಡು ಮಗುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಚಿರಾಟ ಕೇಳಿ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸರು ಭೇಟಿ ನೀಡಿದ್ದಾರೆ. ಮಗುವನ್ನು ಕನಕಪುರ ತಾಲೂಕು, ಆಸ್ಪತ್ರೆಗೆ ದಾಖಲಿಸಿದ್ದು, ನಂತರ ರಾಮನಗರ ದತ್ತು ಕೇಂದ್ರಕ್ಕೆ ಒಂದು ತಿಂಗಳ ಮಗುವನ್ನು ರವಾನಿಸಲಾಯಿತು . ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Share News

About BigTv News

Check Also

ಹುಬ್ಬಳ್ಳಿ ಸಿದ್ಧಾರೂಢ ಮಠದ ಬಳಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ ದಾಖಲು

ಹುಬ್ಬಳ್ಳಿ: ಸಿದ್ಧಾರೂಢ ಮಠದ ಪುಷ್ಕರಣಿ ಬಳಿಯ ಶೌಚಾಲಯದ ಹಿಂಭಾಗ 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಹಳೇಹುಬ್ಬಳ್ಳಿ …

Leave a Reply

Your email address will not be published. Required fields are marked *