Breaking News

ವಿಜಯಪುರ ನಗರದ ಮುಬಾರಕ್ ಚೌಕ್ ಬಳಿ ವ್ಯಕ್ತಿಯ ಕೊಲೆ!

ವಿಜಯಪುರ : ನಗರದ ಮುಬಾರಕ್ ಚೌಕ್ ಬಳಿ ವ್ಯಕ್ತಿಯ ಕೊಲೆಯಾಗಿರುವ ಘಟನೆ ನಡೆದಿದೆ.ಶರಣು ಮಲ್ಲೇಶಪ್ಪ ಜೀವರ್ಗಿ (48) ಕೊಲೆಯಾದ ವ್ಯಕ್ತಿ. ಸ್ವಂತ ಪೈನಾನ್ಸ್ ನನ್ನು ಶರಣಪ್ಪ ನಡೆಸುತ್ತಿದ್ದರು. ಕಾಳಿಕಾ ನಗರದ ವಾಸಿ ಶರಣಪ್ಪ ಜೀವರ್ಗಿ ನಿತ್ಯ ಪೈನಾನ್ಸ್ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದನು. ಇಂದು ಸಾಯಂಕಾಲದ ವೇಳೆ ಪಿಗ್ಮಿ ಕಲೆಕ್ಷನ್ ಗೆ ಬಂದಾಗ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಚ್ಚಿನಿಂದ ಕೊಚ್ಚಿ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಲ್ ಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತನಿಖೆ ಬಳಿಕ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಘಟನೆಯಿಂದ ನಗರ ವಾಸಿಗಳು ಬೆಚ್ಚಿ ಬಿದ್ದಿದ್ದಾರೆ.

Share News

About BigTv News

Check Also

ಅಕ್ರಮ ಜಾನುವಾರು ಸಾಗಾಟ ಜಾಲ ಭೇದಿಸಿದ ಪೊಲೀಸರು, 17 ಜಾನುವಾರುಗಳ ರಕ್ಷಣೆ

ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. …

Leave a Reply

Your email address will not be published. Required fields are marked *