Breaking News

ವಾಯುವಿಹಾರಕ್ಕೆ ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ

ಬಾಗಲಕೋಟೆ: ಪಟ್ಟಣದ ಎ.ಆರ್. ಹೈಸ್ಕೂಲ್ ಮೈದಾನದಲ್ಲಿ ಬುಧವಾರ ರಾತ್ರಿ ವಾಯುವಿಹಾರಕ್ಕೆ ತೆರಳಿದ್ದ ಪತ್ರಕರ್ತ ಮಹಾಂತೇಶ ಅಂಬಿಗೇರ (49) ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ರಾತ್ರಿ 9.15ರ ಸುಮಾರಿಗೆ ವಿದ್ಯುತ್‌ ಕಡಿತವಾಗಿದ್ದ ವೇಳೆ ಹಲ್ಲೆ ನಡೆಸಿ, ಅವರ ಮೊಬೈಲ್ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಮಹಾಂತೇಶ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದವರು ಯಾರೆಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಒಂದು ಜೋಡಿ ಚಪ್ಪಲಿ ಹಾಗೂ ಬಡಿಗೆ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಬೆಂಗಳೂರು: ಒಂದು ವರ್ಷದಲ್ಲಿ 170ಕ್ಕೂ ಹೆಚ್ಚು ಬಾರಿ ಕಳ್ಳತನ; ಮನೆಗೆಲಸದಾಕೆ ಬಂಧನ

ಬೆಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಗೆಲಸದಾಕೆ ಮಾಲೀಕರಿಗೆ ತಿಳಿಯದಂತೆ ಕಳೆದೊಂದು ವರ್ಷದಲ್ಲಿ 170ಕ್ಕೂ ಹೆಚ್ಚು ಬಾರಿ ಚಿನ್ನಾಭರಣ ಕದ್ದಿದ್ದಾಳೆ …

Leave a Reply

Your email address will not be published. Required fields are marked *