ದಾವಣಗೆರೆ: ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ಯುವಕರಿಬ್ಬರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ನೆಡೆದಿದೆ.
ಬಿದರಹಳ್ಳಿ ಗ್ರಾಮದ ಸಿದ್ದೇಶ ನಾಯ್ಕ್ ಹಾಗೂ ಲಕ್ಕಿನಕೊಪ್ಪದ ಗೀರಿಶ ನಾಯ್ಕ ಎಂಬುವವರೇ ದಾಂದಲೇ ಮಾಡಿದವರಾಗಿದ್ದು,ನರೇಗಾ ಕೆಲಸ ವಿಳಂಬ ಮಾಡಿದ್ದರಿಂದ ಗ್ರಾಂ ಪಂಚಾಯತಿ ಪಿಡಿಒ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಕಛೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಕಛೇರಿಗೆ ಬಂದು ನರೇಗಾ ಕೆಲಸ ತಮಗೆ ಬೇಕಾದ ಕಡೆ ಕೊಡಿ ಎಂದು ಒತ್ತಾಯಿಸಿದ್ದು, ಪಿಡಿಒ ಹಾಗೂ ಸಿಬ್ಬಂದಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ,ಕಛೇರಿಯಲ್ಲಿದ್ದ ಕುರ್ಚಿ,ಕಿಟಕಿ ಗಾಜು ಪುಡಿಪುಡಿ ಮಾಡಿ ದಾಂದಲೆ ಮಾಡಿದ್ದಾರೆ.ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಗ್ರಾಮ ಪಂಚಾಯತಿ ಪಿಡಿಒ ಹಾಗೂ ಸಿಬ್ಬಂದಿಗಳು ಯುವಕರಿಬ್ಬರ ಮೇಲೆ ದೂರಿ ನೀಡಿದ್ದಾರೆ. ನ್ಯಾಮತಿ ಪೋಲಿಸ ರು ಆರೋಪಿಗಳನ್ನು ಬಂಧಿಸಿದ್ದು ಈ ಕುರಿತು ನ್ಯಾಮತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

