Breaking News

ನಕಲಿ ಸಿಗರೇಟ್​ ಮಾರಾಟ

ಚಿಂತಾಮಣಿ: ನಗರದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಯ ನಕಲಿ ಸಿಗರೇಟ್​ ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ಕಂಪನಿ ಬ್ರ್ಯಾಂಡ್​ ಪ್ರೊಟೆಕ್ಷನ್​ ಅಧಿಕಾರಿಗಳು, ಸ್ಥಳಿಯ ಪೊಲೀಸರು ಜಂಟಿ ದಾಳಿ ನಡೆಸಿ ನಕಲಿ ಸಿಗರೇಟ್​ ಪ್ಯಾಕೆಟ್​ಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ನಗರದ ಎಂಜಿ ರಸ್ತೆಯಲ್ಲಿ ಅಂಗಡಿಯಲ್ಲಿ ನಕಲಿ ಸಿಗರೇಟ್​ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿ ಬ್ರ್ಯಾಂಡ್​ ಪ್ರೊಟೆಕ್ಷನ್​ ವಿಭಾಗಕ್ಕೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆ ಕಾರ್ಯಾಚರಣೆಗಿಳಿದ ವ್ಯವಸ್ಥಾಪಕರು, ಪೊಲೀಸರ ನೆರವಿನೊಂದಿಗೆ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ವಿವಿಧ ಮಾದರಿ ನಕಲಿ ಸಿಗರೇಟ್​ ಬಾಕ್ಸ್​ಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಅಸಲಿ ಪ್ಯಾಕೆಟ್​ಗಳಂತೆಯೇ ಕಾಣುವ ನಕಲಿ ಉತ್ಪನ್ನಗಳು ಗ್ರಾಹಕರ ದಿಕ್ಕು ತಪ್ಪಿಸುತ್ತಿದ್ದವು. ನಕಲಿ ಸಿಗರೇಟ್​ ಮಾರಾಟಕ್ಕೆ ಸಂಬಂಧಿಸಿದಂತೆ ಬ್ರ್ಯಾಂಡ್​ ಪ್ರೊಟೆಕ್ಷನ್​ ಮತ್ತು ನಕಲಿ ವಿರೋಧಿ ಸೇವಾ ಪೂರೈಕೆದಾರ ಅನ್ವೇಶ್​ ಐಪಿಆರ್​ ಸರ್ವೀಸಸ್​ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಶ್ರೀನಿವಾಸ್​ ಎಂಬುವವರು ನೀಡಿದ ದೂರಿನ ಮೇಲೆ ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *