Breaking News

ಹುಬ್ಬಳ್ಳಿ ಧಾರವಾಡ ಪೋಲಿಸರ ನೋಟಿಸ್ ಕಥೆ…ಪೊಲೀಸರ ನೋಟಿಸ್ ಗೆ ಒಂದು ಬಲಿ .. ಇನ್ನಷ್ಟು ಬಲಿ ಕಮಿಷನರ್ ಮೇಡಂ…..? ಕುಟುಂಬದ ಆರೋಪ..! Big Exclusive

ಹುಬ್ಬಳ್ಳಿ: ಗಂಡ-ಹೆಂಡತಿ ಜಗಳ ಪೋಲಿಸರ ಸಂಧಾನದಕ್ಕೆ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.ನಿಖಲ್ 28 ಆತ್ಮಹತ್ಯೆ ಮಾಡಿಕೊಂಡ ಪತಿ ಆಗಿದ್ದಾನೆ.11 ತಿಂಗಳ ಹಿಂದೆ ನಿಖಿಲ್ ಪ್ರೀತಿ ಎಂಬ ಯುವತಿಯನ್ನು ಮದುವೆಯಾಗಿದ್ದ.ಆದರೆ ಗಂಡ -ಹೆಂಡತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೆ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು ಎಂಬ ಆರೋಪ ಮಾಡಲಾಗಿದೆ.ಇದರಿಂದಾಗಿ ತವರು ಮನೆಗೆ ಹೋಗಿದ್ದ ಪ್ರೀತಿ.ನಿಖಿಲ್ ಪತ್ನಿ ಪ್ರೀತಿ ಮತ್ತು ಕುಟುಂಬಸ್ಥರು ನಿನ್ನೆ ಕೇಶ್ವಾಪುರ ಠಾಣೆಗೆ ನಿಖಿಲ್ ಕರೆಯಿಸಿ ಬೇದರಿಕೆ ಹಾಕಿರುವ ಆರೋಪ ಮಾಡಿದಾರೆ.ನೋಟಿಸು ನೀಡಿ ನಿಖಿಲ್ ನನ್ನು ಠಾಣೆ ಕರೆಸಿ ಪೋಲಿಸರು ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಲಾಗಿದೆ. ಒಂದೆ ದಿನದಲ್ಲಿ 2 ಲಕ್ಷ ರೂಪಾಯಿ ನೀಡುವಂತೆ ತಾಕೀತು ಮಾಡಿ ನಿಖಿಲ್ನನ್ನು ಬಿಟ್ಟು ಕಳುಹಿಸಿದ್ದ ಕೇಶ್ವಾಪುರ ಪೊಲೀಸರು.ಇದರಿಂದ ಮನನೊಂದು ಮನೆಗೆ ಬಂದು ಇಂದು ಬೆಳಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಿಖಿಲ್. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *