Breaking News

ಶ್ರೀಲಂಕಾ, ‘ಡಕ್ ಔಟ್’ ವಿಚಾರದಲ್ಲಿ ಹೊಸ ಇತಿಹಾಸ…

ಕ್ರಿಕೆಟ್ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆ, ಫುಟ್‌ಬಾಲ್ ಬಿಟ್ಟರೆ ಕ್ರಿಕೆಟ್ ಆಟದಲ್ಲೇ ಹೆಚ್ಚು ದುಡ್ಡು ಇದೆ ಅನ್ನೋದು ಜಗತ್ತಿಗೇ ಗೊತ್ತು. ಆದರೆ ಈ ದುಡ್ಡಿನ ಜೊತೆ ಕ್ರಿಕೆಟ್ ಆಟದಲ್ಲಿ ಕ್ರೇಜ್ ಇದೆ, ಖುಷಿ ಇದೆ, ದಾಖಲೆಗಳ ದೊಡ್ಡ ಇತಿಹಾಸವೇ ಇದೆ. ಹೀಗಿದ್ದಾಗಲೇ, ನಿನ್ನೆ ಶ್ರೀಲಂಕಾ ಕ್ರಿಕೆಟ್ ತಂಡ ಭಾರತದ ಎದುರು ಹೀನಾಯವಾಗಿ ಸೋತು ಹಲವು ಇತಿಹಾಸ ಸೃಷ್ಟಿ ಮಾಡಿ ಹೋಗಿದೆ ಗೊತ್ತಾ?

ಕ್ರಿಕೆಟ್ ಭಾಷೆಯಲ್ಲಿ ‘ಡಕ್ ಔಟ್’ ಎಂಬ ಪದವು, ಸೊನ್ನೆಯನ್ನು ಸೂಚಿಸುತ್ತದೆ. ಅಂದ್ರೆ ಯಾವುದೇ ಒಬ್ಬ ಆಟಗಾರ ಒಂದು ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ರನ್ ಕೂಡ ಬಾರಿಸದೆ ಸೊನ್ನೆಗೆ ಔಟ್ ಆಗಿದ್ರೆ ಅದನ್ನ ಡಕ್ ಔಟ್ ಅಂತಾ ಕರೆಯುತ್ತಾರೆ. ಹೀಗೆ ಸಾಮಾನ್ಯವಾಗಿ ಒಂದು ಪಂದ್ಯದಲ್ಲಿ ಒಬ್ಬರು ಅಥವಾ ಇಬ್ಬರು, ಅಬ್ಬಬ್ಬಾ ಅಂದ್ರೆ ಮೂವರು ಡಕ್ ಔಟ್ ಆಗುವುದು ಮಾಮೂಲು ಬಿಡಿ. ಆದರೆ ಈ ವಿಚಾರದಲ್ಲೂ ನಿನ್ನೆ ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವದಾಖಲೆ ಮಾಡಿದೆ!

ಅದ್ಯಾವ ಘಳಿಗೆಯಲ್ಲಿ ಶ್ರೀಲಂಕಾ ಆಟಗಾರರು ನಿನ್ನೆ ಮುಂಬೈನ ಕ್ರಿಕೆಟ್ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರೋ ಗೊತ್ತಿಲ್ಲ. ಬರ್ತಿದ್ದಂತೆ ಸೋಲಿನ ಮುನ್ಸೂಚನೆ ಸಿಕ್ಕಿತ್ತು. ಮೊದಲ ವಿಕೆಟ್ ರೋಹಿತ್ ಶರ್ಮಾ ಬಹುಬೇಗ ಔಟಾಗಿದ್ದು ಬಿಟ್ಟರೆ ಭಾರತದ ವಿರುದ್ಧದ ಮ್ಯಾಚ್ ವೇಳೆ ಶ್ರೀಲಂಕಾ ತಂಡಕ್ಕೆ ಯಾವುದೇ ಖುಷಿ ಸಿಗಲಿಲ್ಲ. ಅದ್ರಲ್ಲೂ ಶ್ರೀಲಂಕಾ ತಂಡದವರು ಆಡಿದ ಬ್ಯಾಟಿಂಗ್, ಇಡೀ ಕ್ರಿಕೆಟ್ ಇತಿಹಾಸದಲ್ಲೇ ಮತ್ತೊಂದು ಕಳಪೆ ಪ್ರದರ್ಶನ ಆಗಿತ್ತು. ಶ್ರೀಲಂಕಾ ತಂಡದ ಅರ್ಧಕರ್ಧ ದಾಂಡಿಗರು ಒಂದೂ ರನ್ ಗಳಿಸಿದೆ ಸೊನ್ನೆಯನ್ನು ಸುತ್ತಿ ಡಕ್ ಔಟ್ ಆದರು. ಈ ಮೂಲಕ ಶ್ರೀಲಂಕಾ, ‘ಡಕ್ ಔಟ್’ ವಿಚಾರದಲ್ಲಿ ಕೂಡ ಹೊಸ ಇತಿಹಾಸ ನಿರ್ಮಿಸಿದೆ.

Share News

About BigTv News

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *